ಬೆಂಗಳೂರು, ಅ.17 (DaijiworldNews/HR): ಮಹಾತ್ಮರ ಬೆನ್ನು ಬಿಡದ ಟೀಕಾಕಾರರು ನನ್ನಂತಹ ಹುಲುಮಾನವರನ್ನು ಬಿಡುತ್ತಾರೆಯೇ? ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮಹಾತ್ಮ ಗಾಂಧೀಜಿ ಅವರನ್ನು ಹಿಂದೂ ವಿರೋಧಿ ಎನ್ನುತ್ತಿದ್ದ ಹಿಂದೂಗಳು, ದಲಿತ ವಿರೋಧಿ ಎನ್ನುತ್ತಿದ್ದ ದಲಿತರು, ಮುಸ್ಲಿಮ್ ವಿರೋಧಿ ಎನ್ನುತ್ತಿದ್ದ ಮುಸ್ಲಿಮರು ಇದ್ದರು. ಮಹಾತ್ಮರ ಬೆನ್ನು ಬಿಡದ ಟೀಕಾಕಾರರು ನನ್ನಂತಹ ಹುಲುಮಾನವರನ್ನು ಬಿಡುತ್ತಾರೆಯೇ?" ಸಬ್ ಕೋ ಸನ್ಮತಿ ದೇ ಭಗವಾನ್ ಎಂದು ಹೇಳಿದ್ದಾರೆ.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಎಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ ಸಮರ ಮುಂದುವರೆದಿದ್ದು, ಇಂದು ಟ್ವಿಟ್ಟರ್ ಮೂಲಕ ವಾಗ್ದಾಳಿ ಮುಂದುವರೆದಿದೆ.