ಹುಬ್ಬಳ್ಳಿ, ಅ.17 (DaijiworldNews/PY): "ಹಾನಗಲ್ ಹಾಗೂ ಸಿಂದಗಿ ಎರಡು ಕಡೆಗಳಲ್ಲಿ ಹೆಚ್ಚಿನ ಸಮಯ ನೀಡಿ ಪ್ರಚಾರ ನಡೆಸುತ್ತೇನೆ. ಎರಡು ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತಗಳಿಂದ ಬಿಜೆಪಿ ಅಭ್ಯರ್ಥಿಗಳು ಆಯ್ಕೆ ಆಗುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸ ನನಗಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರ್ಥಿಕತೆಯ ಮೇಲೆ ತೈಲ ಬೆಲೆ ಪರಿಣಾಮ ಬೀರುತ್ತದೆ. ರಾಜ್ಯದ ಆರ್ಥಿಕತೆ ಸುಧಾರಣೆಯಾದ ಬಳಿಕ ಅವಕಾಶಗಳಿವೆ. ಆರ್ಎಸ್ಎಸ್ ವಿಚಾರದ ಕುರಿತು ಈಗಾಗಲೇ ಉತ್ತರ ನೀಡಿದ್ದೇನೆ" ಎಂದಿದ್ದಾರೆ.
"ಸಂಗೂರನಲ್ಲಿ ರಿವ್ಯೂವ್ ಮಾಡಿ ರೈತರ ಕಬ್ಬು ನುರಿಸುವ ಕೆಲಸವನ್ನು ಈಗಾಗಲೇ ಮಾಡಿದ್ದು ಬಿಜೆಪಿ ಸರ್ಕಾರ. ಅದನ್ನು ಸುಧಾರಿಸುವ ಕೆಲಸವನ್ನು ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದೆ. ಈ ವಿವರವನ್ನು ಸಭೆಯಲ್ಲಿ ನೀಡುತ್ತೇವೆ. ಹಾನಗಲ್ಗೆ 2,400 ಕೋಟಿ ರೂ. ನೀಡಿದ್ದೇನೆ. ಹಾನಗಲ್ ಅಳಿಯ ಏನು ನೀಡಿದ್ದಾರೆ ಎನ್ನುವ ಸಿದ್ದರಾಮಯ್ಯ ಅವರು 2,400 ಕೋಟಿ ರೂ. ಯಾವುದಕ್ಕೆ ಎಲ್ಲಿ ನೀಡಿದ್ದಾರೆ ಎಂದು ತಿಳಿಸಲಿ" ಎಂದು ಕೇಳಿದ್ದಾರೆ.
"ಹಾವೇರಿ ಜಿಲ್ಲೆ ಸಂಗೂರ ಸಕ್ಕರೆ ಕಾರ್ಖಾನೆಗೆ ತನ್ನದೇ ಆದ ಇತಿಹಾಸವಿದ್ದು, ಆ ಫ್ಯಾಕ್ಟರಿ ಮುಚ್ಚುವುದರಲ್ಲಿ ಕಾಂಗ್ರೆಸ್ಸಿಗರ ಕೊಡುಗೆ ಬಹಳ ಇದೆ" ಎಂದು ಹೇಳಿದ್ದಾರೆ.