ಶ್ರೀನಗರ, ಅ.16 (DaijiworldNews/HR): ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಈದ್ಗಾ ಬಳಿ ಒಬ್ಬ ಬೀದಿ ವ್ಯಾಪಾರಿಯನ್ನು ಭಯೋತ್ಪಾದಕರು ಹತ್ಯೆಗೈದಿದ್ದು, ಇನ್ನೊಬ್ಬ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸ್(ಸಾಂದರ್ಭಿಕ ಚಿತ್ರ)
ಈ ಇಬ್ಬರನ್ನು ಬಿಹಾರದ ಬಂಕಾ ಜಿಲ್ಲೆಯ ಅರವಿಂದ ಕುಮಾರ್ ಮತ್ತು ಉತ್ತರ ಪ್ರದೇಶದ ಸಹರನ್ಪುರದ ಸಗೀರ್ ಅಹ್ಮದ್ ಎಂದು ಗುರುತಿಸಲಾಗಿದೆ.
ಶ್ರೀನಗರ ಮತ್ತು ಪುಲ್ವಾಮದಲ್ಲಿ 2 ನಾನ್ಲೋಕಲ್ ಕಾರ್ಮಿಕರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದು, ಬಂಕಾ ಬಿಹಾರದ ಶ್ರೀ ಅರವಿಂದ ಕುಮಾರ್ ಶಾ ಶ್ರೀನಗರದಲ್ಲಿ ಮತ್ತು ಯುಪಿಯ ಶ್ರೀ ಸಗೀರ್ ಅಹ್ಮದ್ ಪುಲ್ವಾಮದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಈ ಪ್ರದೇಶಗಳನ್ನು ಸುತ್ತುವರಿಯಲಾಗಿದೆ ಮತ್ತು ಹುಡುಕಾಟಗಳನ್ನು ಪ್ರಾರಂಭಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಇನ್ನು ಶುಕ್ರವಾರ ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ನಾಗರಿಕ ಹತ್ಯೆಯಲ್ಲಿ ಭಾಗಿಯಾದ ಒಬ್ಬ ಉಗ್ರನನ್ನು ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಎನ್ಕೌಂಟರ್ನಲ್ಲಿ ಹೊಡೆದುರುಳಿಸಿವೆ.