ಬೆಂಗಳೂರು, ಅ 16 (DaijiworldNews/MS): ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿರುದ್ಧ ಮತ್ತೆ ರಾಜ್ಯ ಕಾಂಗ್ರೆಸ್ ಘಟಕವೂ ಹರಿಹಾಯ್ದಿದ್ದು ಅಂದಿನ ಜರಂಗದಳ ಕಾರ್ಯಕರ್ತ, ಇಂದಿನ ಫುಲ್ ಟೈಂ ರಾಜಕಾರಣಿ ಕೋಟಿ ರವಿ ಆಗಿದ್ದು ಹೇಗೆ ಎಂದು ಪ್ರಶ್ನಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ , " ನಿಮ್ಮ ಸಂಬಂಧಿಯನ್ನು ಮುಂದಿಟ್ಟುಕೊಂಡು ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆಗಳನ್ನು ಪಡೆದಿರುವ ನೀವು ಎಷ್ಟೆಷ್ಟು ಕಮಿಷನ್ ಕೊಟ್ಟಿದ್ದೀರ? ಸಾರಿಗೆ ಬಸ್ಸಿನಲ್ಲಿ ಓಡಾಡುತ್ತಿದ್ದ ಅಂದಿನ ಬಜರಂಗದಳ ಕಾರ್ಯಕರ್ತ, ಇಂದಿನ ಫುಲ್ ಟೈಂ ರಾಜಕಾರಣಿ ಸಿಟಿ ರವಿ , ಕೋಟಿರವಿ ಆಗಿದ್ದು ಹೇಗೆ? ಎಲ್ಲಿ, ಯಾರಿಂದ, ಎಷ್ಟೆಷ್ಟು ಕಲೆಕ್ಷನ್ ಮಾಡಿದಿರಿ? ಎಂದು ಲೇವಡಿ ಮಾಡಿದೆ.
2004-2010ರ ಮಧ್ಯೆ ನಿಮ್ಮ ಆಸ್ತಿ 49 ಲಕ್ಷದಿಂದ 3.18 ಕೋಟಿ ರು ಏರಿಕೆಯಾಗಿದೆ ಎಂಬ ದೂರು ದಾಖಲಾಗಿತ್ತು. 2018 ರಲ್ಲಿ ನೀವೇ ಘೋಷಿಸಿದ ಅಧಿಕೃತ ಆಸ್ತಿ 5 ಕೋಟಿಗೂ ಅಧಿಕ, ನಿಮ್ಮ ಕುಟುಂಬದ್ದು ಇನ್ನೂ ಅಧಿಕ, ಬೇನಾಮಿ ಅತ್ಯಧಿಕವಾಗಿದೆ ಹಿಂದುತ್ವ ಜಪದಿಂದ ಈ ಪ್ರಮಾಣದ ಆಸ್ತಿ ಸಂಪಾದಿಸಬಹುದೇ ಲೂಟಿರವಿ ಅವರೇ? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.