ದಾವಣಗೆರೆ, ಅ.16 (DaijiworldNews/PY): "ಆರ್ಎಸ್ಎಸ್ ಕುರಿತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಗಂಧಗಾಳಿ ಗೊತ್ತಿಲ್ಲ" ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕುಮಾರಸ್ವಾಮಿ ಅವರಿಗೆ ಆರ್ಎಸ್ಎಸ್ ಬಗ್ಗೆ ತಿಳಿದಿಲ್ಲ. ಯಾವುದೋ ಒಂದು ಪುಸ್ತಕ ಓದಿ ಅದುವೇ ಸತ್ಯ ಎಂದು ಹೇಳುತ್ತಿರುವ ಅವರು ಕುರುಡ ಆನೆಯ ಬಾಲ ಮುಟ್ಟಿ ಆನೆ ಅಂದುಕೊಂಡತೆ ಕುಮಾರಸ್ವಾಮಿ ಅವರು ಅಂದುಕೊಂಡಿದ್ದಾರೆ" ಎಂದಿದ್ದಾರೆ.
"ಅಲ್ಪಸಂಖ್ಯಾತರ ಮತಕ್ಕಾಗಿ ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಪೈಪೋಟಿ ಆರಂಭವಾಗಿದೆ. ಪ್ರಸ್ತುತ ಕಾಂಗ್ರೆಸ್ ಒಡೆದ ಮನೆಯಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಕಚ್ಚಾಟವಾದರೆ, ರಾಜ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಕಚ್ಚಾಟವಿದೆ. ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ದೂಳಿಪಟ ಆಗಲಿದೆ" ಎಂದು ಹೇಳಿದ್ದಾರೆ.
"ಒಂದೂವರೆ ವರ್ಷ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ವಿಧಾನಸಭೆ ಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯಲಿದೆ" ಎಂದಿದ್ದಾರೆ.