ನವದೆಹಲಿ, ಅ.16 (DaijiworldNews/PY): "ಕೆಲವು ಕ್ರಿಮಿನಲ್ಗಳು ರೈತ ಹೋರಾಟವನ್ನು ಕೈಗೆತ್ತಿಕೊಂಡಿದ್ದು, ತಾಲಿಬಾನ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ" ಎಂದು ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ-ಹರಿಯಾಣ ನಡುವಿನ ಸಿಂಘು ಗಡಿಯಲ್ಲಿ 35 ವರ್ಷದ ವ್ಯಕ್ತಿಯನ್ನು ಹತ್ಯೆಗೈದ ಘಟನೆಯ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.
"ಕೆಲವು ಕ್ರಿಮಿನಲ್ಗಳು ರೈತರ ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದಾರೆ. ಅವರು ತಾಲಿಬಾನ್ನಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಮಹಿಳೆಯೋರ್ವರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ರೈತರ ಪ್ರತಿಭಟನಾ ಸ್ಥಳಗಳಲ್ಲಿ ಈ ರೀತಿಯಾದ ಕೃತ್ಯಗಳು ಹೆಚ್ಚುತ್ತಿರುವುದು ತಾಲಿಬಾನ್ ವರ್ತನೆಗೆ ಸಾಕ್ಷಿ" ಎಂದಿದ್ದಾರೆ.
"ದಲಿತ ವ್ಯಕ್ತಿಯ ವಿಚಾರದಲ್ಲಿ ಕಾಂಗ್ರೆಸ್ ಏಕೆ ಮೌನವಾಗಿದೆ?. ಛತ್ತೀಸ್ಗಡ ಹಾಗೂ ರಾಜಸ್ತಾನದಲ್ಲಿ ಹಲವು ದಲಿತರ ಮೇಲೆ ದಾಳಿಗಳಾಗಿವೆ. ಆ ವಿಚಾರವಾಗಿ ಏಕೆ ಕಾಂಗ್ರೆಸ್ ಹೋರಾಟ ಮಾಡುತ್ತಿಲ್ಲ?" ಎಂದು ಕೇಳಿದ್ದಾರೆ.