ರಾಯ್ ಪುರ, ಅ.16 (DaijiworldNews/PY): ರಾಯ್ಪುರ ರೈಲು ನಿಲ್ದಾಣದಲ್ಲಿ ನಡೆದ ಸ್ಪೋಟಲ್ಲಿ 6 ಮಂದಿ ಸಿಆರ್ಪಿಎಫ್ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಇಂದು ಬೆಳಗ್ಗೆ ಸಿಆರ್ಪಿಎಫ್ನ 211 ಬೆಟಾಲಿಯನ್ನ ಯೋಧರು ವಿಶೇಷ ರೈಲಿನಲ್ಲಿ ಜಮ್ಮುವಿಗೆ ಹೊರಟಿದ್ದರು. ಈ ಸಂದರ್ಭ ಬಾಕ್ಸ್ನಲ್ಲಿರಿಸಿದ್ದ ಡಿಟೋನೇಟರ್ಸ್ ಸ್ಪೋಟಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಯ್ ಪುರ ಎಸ್ಪಿ ಪ್ರಶಾಂತ್ ಅಗರ್ವಾಲ್, "ಈ ವಿಶೇಷ ರೈಲು ಒರಿಸ್ಸಾದ ಝರ್ಸುಗುಡಾದಿಂದ ಜಮ್ಮುವಿಗೆ ತೆರಳುತ್ತಿತ್ತು. ಬೆಳಗ್ಗೆ 6.30ರ ಸುಮಾರಿಗೆ ರಾಯ್ ಪುರ ನಿಲ್ದಾಣದಲ್ಲಿ ಸ್ಪೋಟವಾಗಿದೆ" ಎಂದು ತಿಳಿಸಿದ್ದಾರೆ.
"ಬೆಟಾಲಿಯನ್ ಪಡೆ, ನಿಲ್ದಾಣದಲ್ಲಿ ಸ್ಪೋಟಕಗಳನ್ನು ತುಂಬಿದ್ದ ಬಾಕ್ಸ್ಗಳನ್ನು ರೈಲಿನಲ್ಲಿ ಇರಿಸುವ ಸಂದರ್ಭ ಆಕಸ್ಮಿಕವಾಗಿ ಬಾಕ್ಸ್ ಕೆಳಗೆ ಬಿದ್ದಿದೆ. ಪರಿಣಾಮ 29 ಡಿಟೋನೇಟರ್ಸ್ಗಳು ಸ್ಪೋಟಗೊಂಡಿದ್ದು, ಸಿಬ್ಬಂದಿಗಳು ಗಾಯಗೊಂಡಿದ್ದಾರೆ" ಎಂದಿದ್ದಾರೆ.