ಛತ್ತೀಸ್ಗಡ, ಅ.16 (DaijiworldNews/PY): ವಿಜಯದಶಮಿಯ ಹಿನ್ನೆಲೆ ದುರ್ಗಾ ಉತ್ಸವ ಮಾಡುತ್ತಿದ್ದ ಭಕ್ತರ ಮೇಲೆ ಕಾರು ಹರಿದು ಓರ್ವ ಸಾವನ್ನಪ್ಪಿ, 20 ಮಂದಿ ಗಾಯಗೊಂಡ ಘಟನೆ ಛತ್ತೀಸ್ಗಡದಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ಯುವಕನ್ನು ಗೌರವ್ ಅಗರ್ವಾಲ್ (21) ಎಂದು ಗುರುತಿಸಲಾಗಿದೆ.
ದುರ್ಗಾ ಮೂರ್ತಿಯ ವಿಸರ್ಜನೆಗಾಗಿ ಸಾಗುತ್ತಿದ್ದ ಮೆರವಣಿಗೆಯ ಮೇಲೆ ವೇಗವಾಗಿ ಬಂದ ಕಾರೊಂದು ಭಕ್ತರ ಮೇಲೆ ಹರಿದಿದ್ದು, ಇದರಿಂದ ರೊಚ್ಚಿಗೆದ್ದ ಉಳಿದ ಭಕ್ತರು ಕಾರನ್ನು ರಸ್ತೆ ಬದಿಗೆ ಉರುಳಿಸಿ ಬೆಂಕಿ ಹಚ್ಚಿದ್ದಾರೆ.
ಘಟನೆಯ ಸಂಬಂಧ ಕಾರಿನಲ್ಲಿದ್ದ ಮಧ್ಯಪ್ರದೇಶ ಮೂಲದ ಬಬ್ಲು ವಿಶ್ವಕರ್ಮ (21) ಹಾಗೂ ಶಿಶುಪಾಲ್ ಸಾಹು(26) ಎಂಬವರನ್ನು ಬಂಧಿಸಲಾಗಿದೆ ಎಂದು ಜಶ್ಪುರದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.