ನವದೆಹಲಿ, ಅ.16 (DaijiworldNews/PY): ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಪ್ರತಿ ಲೀಟರ್ಗೆ 35 ಪೈಸೆ ಏರಿಸಲಾಗಿದ್ದು, ದೇಶದಲ್ಲಿ ಇಧಂಧನ ದರ ಗರಿಷ್ಠ ಮಟ್ಟಕ್ಕೆ ತಲುಪಿದೆ.
ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 105.49 ರೂ., ಡೀಸೆಲ್ ದರದಲ್ಲಿಯೂ 35 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ 93.22 ರೂ. ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 111.43 ರೂ. ಹಾಗೂ ಲೀಟರ್ ಡೀಸೆಲ್ ದರ 102.15 ರೂ. ನಿಗದಿಯಾಗಿದೆ.
ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 106.11 ರೂ. ಹಾಗೂ ಲೀಟರ್ ಡೀಸೆಲ್ ದರ 97.33 ರೂ. ಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 102.70 ರೂ. ಹಾಗೂ ಲೀಟರ್ ಡೀಸೆಲ್ ದರ 98.59 ರೂ. ಇದೆ.
ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 109.16 ರೂ., ಡೀಸೆಲ್ ದರ 100 ರೂ., ಹೈದರಾಬಾದ್ನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 109.73 ರೂ., ಡೀಸೆಲ್ ಲೀಟರ್ ಬೆಲೆ 102.80 ರೂ. ನಿಗದಿಯಾಗಿದೆ.
ಸತತ ಮೂರನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಇಂದು ಪ್ರತಿ ಲೀಟರ್ಗೆ 35 ಪೈಸೆ ಏರಿಕೆಯಾಗಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮೂರು ವಾರಗಳ ದರ ಪರಿಷ್ಕರಣೆ ಅವಧಿ ಮುಗಿದ ನಂತರ ಇಂದು ಪೆಟ್ರೋಲ್ ಬೆಲೆಯಲ್ಲಿ 15 ಬಾರಿ ಹೆಚ್ಚಳ ಹಾಗೂ ಡೀಸೆಲ್ ಬೆಲೆಯಲ್ಲಿ 18 ಬಾರಿ ಹೆಚ್ಚಳವಾಗಿದೆ.