ಬೆಂಗಳೂರು, ಅ.15 (DaijiworldNews/PY): "ಆರ್ಥಿಕತೆ ನೀತಿ ಹಾಗೂ ವಿದೇಶಾಂಗ ನೀತಿಯನ್ನು ವಿಕಾಸಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ ಎನ್ನುವುದು ಈಗ ಸ್ಪಷ್ಟವಾಗಿದೆ" ಎಂದು ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಆರ್ಥಿಕತೆ ನೀತಿ ಹಾಗೂ ವಿದೇಶಾಂಗ ನೀತಿಯನ್ನು ವಿಕಾಸಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ ಎನ್ನುವುದು ಈಗ ಸ್ಪಷ್ಟವಾಗಿದೆ. ಲಡಾಖ್ನಲ್ಲಿ ನಮ್ಮ ರಕ್ಷಣಾ ನೀತಿಯನ್ನು ಗಮನಿಸಿದರೆ ಹಿಮಾಲಯದ ವೈಫಲ್ಯದಂತಿದೆ" ಎಂದು ಹೇಳಿದ್ದಾರೆ.
"ವಿಫಲವಾಗಿರುವ ನೀತಿಯನ್ನು ಮತ್ತೆ ಸರಿಪಡಿಸಲು ನಾನು ಸಹಾಯ ಮಾಡಲು ಸಿದ್ಧನಿದ್ದೇನೆ. ಆದರೆ, ಸೊಕ್ಕು ಅಡ್ಡವಾಗಿದೆ" ಎಂದಿದ್ದಾರೆ.
ಕಮೆಂಟ್ವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, "ಉತ್ತರಾಖಂಡದ ಬಿಜೆಪಿ ಸರ್ಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಶೀರ್ವಾದದೊಂದಿಗೆ ಆಡಳಿತ ನಡೆಸುತ್ತಿದ್ದು, 52 ಪ್ರಮುಖ ದೇವಾಲಯಗಳನ್ನು ಕೈಬಿಟ್ಟಿಲ್ಲವೇ?. ಹಿಂದೂಗಳ ಉತ್ಸಾಹಕ್ಕೆ ಇದು ಸಂಪೂರ್ಣ ವಿರುದ್ದ" ಎಂದು ಹೇಳಿದ್ದಾರೆ.