ಮುಂಬೈ, ಅ.14 (DaijiworldNews/PY): ಕ್ರೂಸ್ ಶಿಪ್ನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯ ಆದೇಶವನ್ನು ಮುಂಬೈನ ವಿಶೇಷ ನ್ಯಾಯಾಲಯ ಅ.20ಕ್ಕೆ ಮುಂದೂಡಿದೆ.
ಆರ್ಯನ್ ಖಾನ್ ಇಂದು ಜಾಮೀನು ನೀಡದ ಮುಂಬೈ ಸೆಷನ್ಸ್ ಕೋರ್ಟ್, ಬುಧವಾರದವರೆಗೆ ಆದೇಶವನ್ನು ಕಾಯ್ದಿರಿಸಿದ್ದು, ಆರ್ಯನ್ ಖಾನ್ ಅನ್ನು ಮತ್ತೆ ಜೈಲಿಗೆ ಕಳುಹಿಸಿದೆ.
ಮುಂಬೈನಿಂದ ಗೋವ ಕಡೆಗೆ ತೆರಳುತ್ತಿದ್ದ ಹಡಗಿನ ಮೇಲೆ ಎನ್ಸಿಬಿ ಅ.3ರಂದು ದಾಳಿ ನಡೆಸಿತ್ತು. ಈ ವೇಳೆ ಆರ್ಯನ್ ಖಾನ್ ಅವರನ್ನು ಬಂಧಿಸಲಾಯಿತು.
ಸದ್ಯ ಆರ್ಯನ್ ಖಾನ್ ಮುಂಬೈಯ ಅರ್ಥರ್ ರೋಡ್ ಜೈಲಿನಲ್ಲಿದ್ದಾರೆ.