ಬೆಂಗಳೂರು, ಅ.14 (DaijiworldNews/PY): "ಅನೈತಿಕ ಪೊಲೀಸ್ಗಿರಿಯನ್ನು ಸಮರ್ಥಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಲಿಬಾನ್ ಸಂಘಟನೆಯ ನಾಯಕರಂತೆ ಮಾತಾಡಿದ್ದಾರೆ" ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಅನೈತಿಕ ಪೊಲೀಸ್ಗಿರಿಯನ್ನು ಸಮರ್ಥಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಲಿಬಾನ್ ಸಂಘಟನೆಯ ನಾಯಕರಂತೆ ಮಾತಾಡಿದ್ದಾರೆ. ಬಿಜೆಪಿಯ ಆಡಳಿತಕ್ಕೆ ಸಾಮಾಜಿಕ ಭಾವನೆಗಳೇ ಆಧಾರ ಎಂದಾದರೆ ದೇವದಾಸಿ ಪದ್ಧತಿ, ಅಸ್ಪೃಶ್ಯತೆಯ ಆಚರಣೆ, ಬೆತ್ತಲೆ ಸೇವೆಯಂತಹ ಸಾಮಾಜಿಕ ಆಚರಣೆಗಳ ಹಿಂದಿದ್ದ 'ಭಾವನೆ'ಗಳನ್ನು ಪುರಸ್ಕರಿಸಲಾಗುತ್ತದೆಯೇ? ಎಂದು ಪ್ರಶ್ನಿಸಿದೆ.
ರಾಜ್ಯದಲ್ಲಿ 'ಅನೈತಿಕ ಪೊಲೀಸ್ಗಿರಿ' ಹೆಸರಲ್ಲಿ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕುಮ್ಮಕ್ಕಿನ ಹೇಳಿಕೆಯಿಂದ ಸಮಾಜಘಾತುಕ ಶಕ್ತಿಗಳಿಗೆ ಬಲ ಬಂದಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸಗಳು ಈ ಸರ್ಕಾರದಿಂದ ಸಾಧ್ಯವಿಲ್ಲ ಎಂದು ನಿಶ್ಚಿತವಾಯ್ತು ಎಂದು ಹೇಳಿದೆ.