ಬೆಂಗಳೂರು, ಅ 14 (DaijiworldNews/MS): ನೈತಿಕ ಪೊಲೀಸ್ ಗಿರಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, "ರಾಜ್ಯವನ್ನು ಜಂಗಲ್ ರಾಜ್ಯ ಮಾಡಬೇಡಿ. ದಯವಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಿ" ಎಂದು ಟ್ವಿಟರ್ ನಲ್ಲಿ ಆಗ್ರಹಿಸಿದ್ದರು.
ಇದಕ್ಕೆ ಟ್ವಿಟ್ಟರ್ನಲ್ಲಿಯೇ ಸಿದ್ದರಾಮಯ್ಯ ಅವರಿಗೆ ಬಸವರಾಜ ಬೊಮ್ಮಾಯಿ ಖಡಕ್ ತಿರುಗೇಟು ನೀಡಿದ್ದಾರೆ. "ಟಿಪ್ಪು ಸುಲ್ತಾನ ತನ್ನ ಆಳ್ವಿಕೆಯಲ್ಲಿ ಮಾಡಿದಂತೆ ನೀವು ಮುಖ್ಯಮಂತ್ರಿಯಾಗಿದ್ದಾಗ ಹಿಂದೂ ಕಾರ್ಯಕರ್ತರನ್ನು ಸಾಯಿಸುವ ಮೂಲಕ ಹಿಂದೂ ವಿರೋಧಿಗಳ ಆದರ್ಶಪ್ರಾಯರಾಗಿದ್ದಿರಿ. ನಾನು ನಿಮ್ಮಿಂದ ಆಡಳಿತ ಅಥವಾ ಪೊಲೀಸಿಂಗ್ ಕಲಿಯಬೇಕಿಲ್ಲ. ನಿಮ್ಮ ಸರ್ಕಾರದ ಅಡಿಯಲ್ಲಿ ಯಾವುದೇ ರಕ್ಷಣೆ ಇಲ್ಲದೆ ಕುಳಿತಿದ್ದ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಸಮರ್ಥ ಪೊಲೀಸ್ ಪಡೆ ನಮ್ಮ ಬಳಿ ಇದೆ' ಎಂದು ಪ್ರತ್ತ್ಯುತ್ತರ ನೀಡಿದ್ದಾರೆ.
ಹಿಂದೂಗಳ ಹತ್ಯೆಗೆ ಕುರುಡ, ಕಿವುಡ ಮತ್ತು ಮೂಗನಾಗಿದ್ದಾಗ ನಿಮ್ಮ ಅಧಿಕಾರದಲ್ಲಿ ಜಂಗಲ್ ರಾಜ್ಯವಾಗಿತ್ತು. ಅದು ನಿಮ್ಮದು ಜಂಗಲ್ ರಾಜ್ಯವಾಗಿದ್ದರಿಂದ ಆದ್ದರಿಂದ ಹಿಂದೂಗಳು ಸುಪಾರಿ ಕೊಲ್ಲಲ್ಪಟ್ಟರು ಮತ್ತು ಅನೇಕ ಗಲಭೆಗಳು ನಡೆದವು. ನನ್ನ ಆಡಳಿತದಲ್ಲಿ ಇವೆಲ್ಲವೂ ನಿಂತು
ಕಾನೂನೇ ಕ್ರಮ ಕೈಗೊಳ್ಳಲಿದೆ.
ಪ್ರತಿಯೊಂದು ಕ್ರಿಯೆಯೂ ತಕ್ಕ ಪ್ರತಿಕ್ರಿಯೆ ನಮ್ಮ ಸಮಾಜದಲ್ಲಿ ಇರುತ್ತದೆ ಮತ್ತು ಕಾನೂನು ತನ್ನದೇ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾನು ಹೇಳಿದ್ದೆ. ನಿಮ್ಮ ಆಳ್ವಿಕೆಯಲ್ಲಿ ಹಿಂದೂಗಳನ್ನು ಮೂಲೆ ಮೂಲೆಯಲ್ಲಿಯೂ ಕೊಂದಿರುವಂತೆ ಅಲ್ಲ. ನೀವು ಕನ್ನಡಿಯನ್ನು ನಿಮ್ಮ ಕಡೆಗೆ ತಿರುಗಿಸಿಕೊಳ್ಳಬೇಕಿದೆ. ನಿಮ್ಮ ಕೈಗಳಲ್ಲಿ ರಕ್ತ ಅಂಟಿಸಿಕೊಂಡು ಹೇಗೆ ಮಲಗುತ್ತೀರೋ ಎಂದು ದೇವರಿಗೇ ಗೊತ್ತು' ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.