ಕಾರವಾರ, ಅ 14 (DaijiworldNews/MS): ಅಡುಗೆ ಸರಿಯಾಗಿ ಮಾಡಲಿಲ್ಲ ಎಂದು ಊಟದ ವಿಚಾರದಲ್ಲಿ ಕಿರಿಕ್ ತೆಗೆದು ಮಗನೇ ತಾಯಿ ಹಾಗೂ ತಂಗಿಯನ್ನೇ ನಾಡ ಬಂದೂಕಿನಿಂದ ಗುಂಡಿಟ್ಟು ಕೊಂದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಸಿದ್ದಾಪುರ ತಾಲೂಕಿನ ದೊಡ್ಡಮನೆ ಗ್ರಾಮದ ಕುರುಗೋಡು ಬಳಿ ನಿವಾಸಿಯಾಗಿದ್ದ ಮಂಜುನಾಥ ಹಸ್ಲರ್ (24) ಮದ್ಯದ ಅಮಲಿನಲ್ಲಿ ಊಟಕ್ಕೆ ಬಂದು (24) ತಾಯಿ ಪಾರ್ವತಿ ಹಸ್ಲರ್ (45) ಸಹೋದರಿ ಬಿಎ ಪದವಿ ಪಡೆದಿದ್ದ ರಮ್ಯಾ ಹಸ್ಲರ್ (20 ) ಅವರನ್ನು ಕೊಲೆ ಮಾಡಿದ್ದಾನೆ. ಶಿರಸಿ ಪೊಲೀಸ್ ಉಪಾಧೀಕ್ಷಕ ರವಿ ನಾಯ್ಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಸದ್ಯ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.