ಬೆಂಗಳೂರು, ಅ 13 (DaijiworldNews/MS): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕುಡುಕ, ದೊಡ್ಡ ಸ್ಕ್ಯಾಮ್, ಕಲೆಕ್ಷನ್ ಗಿರಾಕಿ ಎಂದು ಕಾಂಗ್ರೆಸ್ ನಾಯಕರಾದ ವಿ.ಎಸ್. ಉಗ್ರಪ್ಪ ಹಾಗೂ ಸಲೀಂ ಮಾತನಾಡಿಕೊಳ್ಳುತ್ತಿರುವ ವಿಡಿಯೊ ವೈರಲ್ ವಿಚಾರವಾಗಿ ಕುಹಕವಾಡಿದ ಬಿಜೆಪಿ ಪಕ್ಷವೂ ಸಿದ್ದರಾಮಯ್ಯ ಅವರು ಹೆಣೆದ ಡಿಕೆಶಿಪದಚ್ಯುತಿ ಎಂಬ ಆಟ ಈಗ ಅಂತಿಮ ಹಂತಕ್ಕೆ ಬಂದಿದೆ ಎಂದು ಹೇಳಿದೆ.
ಮಾತ್ರವಲ್ಲದೆ ಅಲ್ಪಸಂಖ್ಯಾತರಾದ ಸಲೀಂ ಅವರನ್ನು ಅಮಾನತು ಮಾಡಿ ಉಗ್ರಪ್ಪ ಅವರಿಗೆ ರಾಜಮರ್ಯಾದೆ ನೀಡಿದೆ. ಸಿಎಂ ಇಬ್ರಾಹಿಂ ಹೇಳಿದ ಮಾತುಗಳನ್ನು ಕಾಂಗ್ರೆಸ್ ನಿಜ ಮಾಡಿದೆ ಎಂದೂ ಬಿಜೆಪಿ ಕುಟುಕಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಬಿಜೆಪಿ ರಾಜ್ಯ ಘಟಕವು, "ಡಿಕೆಶಿ ಅವರೇ, ಭ್ರಷ್ಟಡಿಕೆಶಿ ಎಂಬ ಬಹುಭಾಷಾ, ಬಹುಕೋಟಿ, ಬಹುತಾರಾಂಗಣದ ಚಿತ್ರಕ್ಕೆ ಕಾಂಗ್ರೆಸ್ ಕರ್ನಾಟಕ ಪಕ್ಷದ ನಾಯಕರೇ, ಪಕ್ಷದ ಕಚೇರಿಯಲ್ಲೇ ಮುಹೂರ್ತ ಮಾಡಿದ್ದಾರೆ. ನಿಮ್ಮ ಹೊಸ 27 ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬಹುದು .ಸಿದ್ದರಾಮಯ್ಯ ಅವರು ಹೆಣೆದ ಡಿಕೆಶಿ ಪದಚ್ಯುತಿ ಎಂಬ ಆಟ ಈಗ ಅಂತಿಮ ಹಂತಕ್ಕೆ ಬಂದಿದೆ ಎಂದು ಬಿಜೆಪಿ, ವಿಪಕ್ಷ ನಾಯಕರೂ ಆಗಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಗ್ಗೆ ಆರೋಪ ಮಾಡಿದ್ದಾರೆ. ಇದು ಸಿದ್ದರಾಮಯ್ಯ ಆಟ ಎಂದು ಟಾಂಗ್ ಕೊಟ್ಟಿದೆ
ಘಟನೆಯ ಬಳಿಕ ಸಲೀಂ ಅವರನ್ನು ಕಾಂಗ್ರೆಸ್ ಅಮಾನತು ಮಾಡಿದೆ. 6 ವರ್ಷಗಳ ಕಾಲ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ಘಟನೆಗೂ ಬಿಜೆಪಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದೆ. ಸಲೀಂ ಅವರನ್ನು ಅಮಾನತುಗೊಳಿಸಿ ಪ್ರಯೋಜನವೇನು? ಅವರು ಹೇಳಿದ್ದು ಸತ್ಯ. ಅದಕ್ಕಾಗಿಯೇ ಡಿ.ಕೆ. ಶಿವಕುಮಾರ್ ಈ ಹಿಂದೆ ತೆರಿಗೆ ಸಂಸ್ಥೆಗಳು ದಾಳಿ ಮಾಡಿದ್ದು. ಅಕ್ರಮ ಸಂಪಾದನೆಯ ಕಾರಣದಿಂದ ತಿಹಾರ್ ಜೈಲು ಯಾತ್ರೆ ಮುಗಿಸಿ ಈಗ ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ. ಈ ಬಗ್ಗೆ ನೈತಿಕ ಹೊಣೆಹೊತ್ತು ರಾಜಿನಾಮೆ ನೀಡುವಿರಾ ಡಿಕೆಶಿ? ಎಂದು ಬಿಜೆಪಿ ಕೇಳಿದೆ.