ಬೆಂಗಳೂರು, ಅ.13 (DaijiworldNews/HR): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾನು ಹೇಳಿಕೆ ನೀಡಿದ್ದು ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಾದ ವಿ.ಎಸ್.ಉಗ್ರಪ್ಪ ಹಾಗೂ ಸಲೀಂ ಸ್ಫೋಟಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಸಿರುವ ಉಗ್ರಪ್ಪ, ಡಿ.ಕೆ.ಶಿವಕುಮಾರ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಆ ರೀತಿ ಮಾತನಾಡಬೇಡ, ಅವರು ಯಾವ ಪರ್ಸಂಟೇಜ್ ಗೂ ಬೆಂಬಲ ನೀಡಲ್ಲ ಎಂದು ಸಲೀಂ ಗೆ ಹೇಳಿದ್ದೇನೆ ಹೊರತು ನಾನು ಅವರ ಬಗ್ಗೆ ಮಾತನಾಡಿಲ್ಲ. ಇನ್ನು ಸಲೀಂ ಹೇಳಿಕೆ ಬಗ್ಗೆ ಅವ್ರನ್ನೇ ಕೇಳಿ" ಎಂದರು.
ಕೆಪಿಸಿಸಿ ಕಚೇರಿಯಲ್ಲಿಯೇ ನಡೆದ ಸಭೆ ವೇಳೆ ವಿ.ಎಸ್.ಉಗ್ರಪ್ಪ ಹಾಗೂ ಸಲೀಂ ಡಿ.ಕೆ.ಶಿವಕುಮಾರ್ ಬಗ್ಗೆ ಚರ್ಚೆ ನಡೆಸಿದ್ದು, ಡಿಕೆಶಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿದ್ದರಾಮಯ್ಯ ಖಡಕ್ ವ್ಯಕ್ತಿಯಂದು ಹೊಗಳಿದ್ದರು. ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ. 6-8 ಪರ್ಸೆಂಟ್ ಇರುವುದನ್ನು 12 ಪರ್ಸೆಂಟ್ ಮಾಡಿದ್ದಾರೆ. ಕೋಟಿ ಕೋಟಿ ಡೀಲ್ ಮಾಡುತ್ತಾರೆ ಎಂದು ಸಲೀಂ ಹೇಳಿದ್ದು,ಇದಕ್ಕೆ ಉಗ್ರಪ್ಪ ಪ್ರತಿಕ್ರಿಯಿಸಿ ನಾವೆಲ್ಲ ಪಟ್ಟು ಹಿಡಿದು ಡಿಕೆಶಿಯನ್ನು ಅಧ್ಯಕ್ಷರನ್ನಾಗಿ ಮಾಡಿದೆವು ಈಗ ನಮ್ಮ ಬುಡಕ್ಕೆ ಇಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು ಇವರಿಬ್ಬರು ಗುಸುಗುಸು ಮಾತಿನ ವಿಡಿಯೋ ಸಖತ್ ವೈರಲ್ ಆಗುತ್ತಿದೆ.