ನವದೆಹಲಿ, ಅ.13 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಸಂಪುಟದ ಮಹತ್ವದ ಸಭೆ ಮಂಗಳವಾರ ನಡೆದಿದ್ದು, ಫಾಸ್ಪ್ಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ 286.55 ಕೋಟಿ ರೂ.ಗಳ ಹೆಚ್ಚುವರಿ ಸಬ್ಸಿಡಿಯನ್ನು ಸಭೆಯಲ್ಲಿ ಘೋಷಿಸಲಾಗಿದೆ.
ಸಂಪುಟ ಸಭೆಯಲ್ಲಿ, ಸ್ವಚ್ಛ ಭಾರತ ಮಿಷನ್ ಅನ್ನು 2025-26ರ ಆರ್ಥಿಕ ವರ್ಷದವರೆಗೆ ಮುಂದುವರಿಸಲು ನಿರ್ಧರಿಸಿದ್ದು, ಸ್ವಚ್ಛ ಭಾರತ ಮಿಷನ್ 2.0 ಅಡಿಯಲ್ಲಿ 1 ಲಕ್ಷ 41 ಸಾವಿರ 600 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇದು ಮೊದಲ ಹಂತಕ್ಕಿಂತ 2.5 ಪಟ್ಟು ಹೆಚ್ಚಾಗಿದೆ.
ಇನ್ನು ಈ ಸಭೆಯು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಅಮೃತ್ ಯೋಜನೆಯಡಿ ತ್ಯಾಜ್ಯ ನೀರು ನಿರ್ವಹಣೆಗೆ ಸಭೆ ಹೊಸ ಯೋಜನೆಯನ್ನು ಹೊಂದಿತ್ತು. ಸ್ವಚ್ಛ ಭಾರತ ಮಿಷನ್ 2.0 ಗಾಗಿ 1416.00 ಕೋಟಿ ಘೋಷಿಸಲಾಗಿದ್ದು, ಇದಕ್ಕೆ ಕೇಂದ್ರದ ಕೊಡುಗೆ 36,465 ಕೋಟಿ ರೂ. ಮೊದಲ ಹಂತವು 2021-22ನೇ ಹಣಕಾಸು ವರ್ಷದಿಂದ 2025-26ನೇ ಹಣಕಾಸು ವರ್ಷದವರೆಗೆ ಇದ್ದು, ಇದಕ್ಕಾಗಿ ಸರ್ಕಾರ 62,009 ಕೋಟಿ ರೂ.ಗಳ ನಿಧಿಯನ್ನು ಘೋಷಿಸಿದೆ.