ತಿರುವನಂತಪುರ, ಅ 13 (DaijiworldNews/MS): ಕಳೆದ ವಾರ ಪುನರ್ರಚನೆಯ ನಂತರ ಬಿಜೆಪಿಯ ರಾಜ್ಯ ಘಟಕದಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ಸೂಚಿಸುತ್ತಾ, ಚಲನಚಿತ್ರ ನಿರ್ಮಾಪಕ , ಬಿಜೆಪಿಯ ಪ್ರಮುಖ ಮುಸ್ಲಿಂ ನಾಯಕ ಅಲಿ ಅಕ್ಬರ್ ಮಂಗಳವಾರ ಪಕ್ಷದ ರಾಜ್ಯ ಸಮಿತಿ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಪಕ್ಷದ ಹಿರಿಯ ನಾಯಕ ಎ ಕೆ ನಜೀರ್ ಅವರನ್ನು ಅಮಾನತುಗೊಳಿಸಿದ ನಂತರ ಅವರ "ಎಲ್ಲಾ ಸಾಂಸ್ಥಿಕ ಜವಾಬ್ದಾರಿಗಳಿಗೆ" ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಪಕ್ಷದ ಸದಸ್ಯತ್ವದಲ್ಲಿ ಮುಂದುವರಿಯುವುದಾಗಿ ತಿಳಿಸಿರುವ ಅವರು, 'ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ಕೆ.ನಜೀರ್ ಅವರ ವಿರುದ್ಧ ಪಕ್ಷದ ರಾಜ್ಯ ಘಟಕವು ಈಚೆಗೆ ತೆಗೆದುಕೊಂಡಿರುವ ಕ್ರಮವು ನೋವು ತರಿಸಿದೆ. ಇದು ಪಕ್ಷದ ಎಲ್ಲಾ ಜವಾಬ್ದಾರಿಗಳನ್ನು ತೊರೆಯಲು ಪ್ರೇರೇಪಿಸಿದೆ' ಎಂದಿದ್ದಾರೆ. ತಮ್ಮ ನಿರ್ಧಾರವನ್ನು ಫೇಸ್ಬುಕ್ ಪೋಸ್ಟ್ ಮೂಲಕ ಪ್ರಕಟಿಸಿರುವ ಅಲಿ ಅಕ್ಬರ್, 'ಒಬ್ಬ ಮುಸ್ಲಿಂ ವ್ಯಕ್ತಿಯಾಗಿ ಬಿಜೆಪಿಯಲ್ಲಿ ಕಾರ್ಯ ನಿರ್ವಹಿಸುವಾಗ ತಮ್ಮದೇ ಕುಟುಂಬ ಹಾಗೂ ಸಮುದಾಯದಿಂದ ಎದುರಿಸಿರುವ ಅವಮಾನ ಮತ್ತು ನಿಂದನೆಗಳನ್ನು ಅರಗಿಸಿಕೊಳ್ಳುವುದು ಕಷ್ಟ' ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಸಮಿತಿ ಸದಸ್ಯ ಸೈಯದ್ ಥಾ ಬಾಫಕಿ ತಂಗಲ್ ಅವರು ಪಕ್ಷ ಮತ್ತು ಅದರ ಅಂಗಸಂಸ್ಥೆಗಳಿಗೆ ರಾಜೀನಾಮೆ ನೀಡಿದರು, ಕೇಸರಿ ಪಕ್ಷವು ಇಡೀ ಮುಸ್ಲಿಂ ಸಮುದಾಯವನ್ನು ಅವಮಾನಿಸುತ್ತಿದೆ ಎಂದು ಹೇಳಿದ್ದರು.
ಅಕ್ಬರ್ ಮತ್ತು ನಜೀರ್ ಉತ್ತರ ಕೇರಳದಲ್ಲಿ ಬಿಜೆಪಿಯ ಮುಸ್ಲಿಂ ಮುಖಂಡರಾಗಿದ್ದು, ಕೇರಳದಲ್ಲಿ ಬಿಜೆಪಿಗೆ ಹಣ ಸಂಗ್ರಹಿಸುವ ಒಂದು ವಿಧಾನ ಮಾತ್ರ ಚುನಾವಣೆಯೆಂದು ಹೇಳಿದ ನಜರ್ ಅವರನ್ನು ಕಳೆದ ವಾರ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.