ಬೆಂಗಳೂರು, ಅ.12 (DaijiworldNews/HR): ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವನೆಂದರೆ ಅದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಪ್ರಶ್ನಿಸಿದ್ದ ಕಾಂಗ್ರೆಸ್, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಬಿಜೆಪಿ, "ಸಿದ್ದರಾಮಯ್ಯ ಕರ್ನಾಟಕವನ್ನು ಕತ್ತಲೆಯತ್ತ ತಳ್ಳಿದ ಮಹಾನುಭಾವ" ಎಂದು ಹೇಳಿದೆ.
ಮಾರ್ಚ್ 18, 2016ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದ ವೇಳೆ ವಿಧಾನಸೌಧದ ಸದನದಲ್ಲಿ ಕರೆಂಟ್ ಕೈ ಕೊಟ್ಟು ಮೊಬೈಲ್ ಬ್ಯಾಟರಿ ಬೆಳಕಿನಲ್ಲಿ ಬಜೆಟ್ ಪ್ರತಿ ಓದಿದ ಪ್ರಸಂಗ ನಡೆದಿತ್ತು. ಆ ಸನ್ನಿವೇಶವನ್ನು ಬಿಜೆಪಿಯು ಟ್ವೀಟ್ ಮಾಡಿದೆ.