ಬೆಂಗಳೂರು, ಅ.12 (DaijiworldNews/HR): ಬಿ.ಎಸ್ ಯಡಿಯೂರಪ್ಪ ಆಪ್ತರ ನಿವಾಸಗಳ ಮೇಲೆ ಐಟಿ ದಾಳಿ ನಡೆದಿದ್ದರ ಹಿಂದೆ ರಾಜಕೀಯ ದುರುದ್ದೇಶವಿದ್ದು, ಯಡಿಯೂರಪ್ಪರನ್ನು ಕಪಿಮುಷ್ಠಿಯಲ್ಲಿಡಲು ಸಿದ್ದರಾಮಯ್ಯ ಈ ಪ್ಲಾನ್ ಮಾಡಿದ್ದಾರೆ" ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸಿದ್ದರಾಮಯ್ಯನವರು ಕುತಂತ್ರ ರಾಜಕಾರಣ ಮಾಡಿದ್ದು, ಯಡಿಯೂರಪ್ಪ - ಸಿದ್ದರಾಮಯ್ಯ ಇಬ್ಬರು ಮಧ್ಯರಾತ್ರಿ ಭೇಟಿ ಮಾಡಿದ್ದರು. ಕೇಂದ್ರ ಸರ್ಕಾರಕ್ಕೆ ಇದರ ಬಗ್ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಹೀಗಾಗಿ ಸಿದ್ದರಾಮಯ್ಯ ಯಡಿಯೂರಪ್ಪರನ್ನು ಕಂಟ್ರೋಲ್ನಲ್ಲಿಡಲು ಈ ಪ್ಲಾನ್ ಮಾಡಿದ್ದಾರೆ" ಎಂದರು.
ಇನ್ನು "ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕೆಂಬ ದುರುದ್ದೇಶ ಸಿದ್ದರಾಮಯ್ಯನವರಲ್ಲಿದ್ದು, ಇದೇ ಕಾರಣಕ್ಕೆ ಅವರು ಐಟಿ ದಾಳಿಯನ್ನು ಅಸ್ತ್ರವಾಗಿ ಪ್ರಯೋಗಿಸಿದ್ದಾರೆ" ಎಂದು ಹೇಳಿದ್ದಾರೆ.