ನವದೆಹಲಿ, ಅ.12 (DaijiworldNews/HR): ಉಚಿತ ಕೊರೊನಾ ಲಸಿಕೆ ನೀಡಿದ್ದೇ ಇಂಧನ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ರಾಜ್ಯ ಖಾತೆ ಸಚಿವ ರಾಮೇಶ್ವರ್ ತೆಲಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಇಂಧನ ಬೆಲೆ ಹೆಚ್ಚಿಲ್ಲ, ಅದು ತೆರಿಗೆಗಳನ್ನು ಒಳಗೊಂಡಿದೆ. ಉಚಿತ ಲಸಿಕೆಯನ್ನು ಪಡೆಯಬೇಕೆಂದರೆ, ಅದಕ್ಕೆ ಹಣ ಎಲ್ಲಿಂದ ಬರುತ್ತದೆ? ಲಸಿಕೆಗೆ ನೀವು ಹಣ ಪಾವತಿಸಿಲ್ಲ. ಹಾಗಾಗಿ ತೆರಿಗೆ ಮೂಲಕ ಹಣ ಸಂಗ್ರಹಿಸಲಾಗಿದೆ" ಎಂದರು.
ಇನ್ನು ಸತತ್ತ ಕೆಲವು ದಿನಗಳಿಂದ ದೇಶದಾದ್ಯಂತ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲೂ ಸೋಮವಾರ ಡೀಸೆಲ್ ದರ 100ರ ಗಡಿ ದಾಟಿದ್ದು, ಪೆಟ್ರೋಲ್ ದರ ಲೀಟರಿಗೆ 30 ಪೈಸೆ ಮತ್ತು ಡೀಸೆಲ್ ದರ ಲೀಟರಿಗೆ 35 ಪೈಸೆ ಹೆಚ್ಚಳವಾಗಿತ್ತು.