ದೆಹಲಿ, ಅ 12 (DaijiworldNews/MS): 'ದೆಹಲಿ ಪೊಲೀಸ್ ವಿಶೇಷ ಘಟಕ ಮಂಗಳವಾರ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಸೆರೆಹಿಡಿದಿದ್ದು, ರಾಜಧಾನಿಯ ನವರಾತ್ರಿಯ ಮೇಲೆ ನಡೆದ ದೊಡ್ಡ ಭಯೋತ್ಪಾದಕ ದಾಳಿಯನ್ನು ತಪ್ಪಿಸಿದೆ.
ಪಾಕಿಸ್ತಾನದ ಪಂಜಾಬ್ ನಿವಾಸಿಯಾಘಿದ್ದ ಮೊಹಮ್ಮದ್ ಅಸ್ರಾಫ್ ಅಲಿಯಾಸ್ ಅಲಿ ಎಂದು ಗುರುತಿಸಲ್ಪಟ್ಟ ಭಯೋತ್ಪಾದಕನನ್ನು ಲಕ್ಷ್ಮಿ ನಗರದ ರಮೇಶ್ ಪಾರ್ಕ್ ಪ್ರದೇಶದಿಂದ ಬಂಧಿಸಲಾಗಿದೆ. ಆತ ದೆಹಲಿಯ ಶಾಸ್ತ್ರಿ ನಗರದಲ್ಲಿ ಭಾರತೀಯ ಪ್ರಜೆಯ ನಕಲಿ ಐಡಿಯೊಂದಿಗೆ ವಾಸಿಸುತ್ತಿದ್ದ. ಈತನಿಂದ ಎಕೆ-47 ಅಸಾಲ್ಟ್ ರೈಫಲ್ ಹ್ಯಾಂಡ್ ಗ್ರೆನೇಡ್ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ್.
ಒಂದು ಎಕೆ -47 ದಾಳಿ ರೈಫಲ್ ಜೊತೆಗೆ ಒಂದು ಹೆಚ್ಚುವರಿ ಮ್ಯಾಗಜೀನ್ ಮತ್ತು 60 ಸುತ್ತು, ಒಂದು ಹ್ಯಾಂಡ್ ಗ್ರೆನೇಡ್, 50 ಸುತ್ತುಗಳಿರುವ ಎರಡು ಅತ್ಯಾಧುನಿಕ ಪಿಸ್ತೂಲುಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.