ಗ್ವಾಲಿಯರ್, ಅ.12 (DaijiworldNews/HR): ಉತ್ತಮ ಡ್ಯಾನ್ಸರ್ ಆಗಲು ವಿಫಲನಾದ ಕಾರಣ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಹದಿಹರೆಯದ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿಟ್ಟಿರುವ ಹುಡುಗ, ಪ್ರಸಿದ್ಧ ಗಾಯಕ ಅರಿಜಿತ್ ಸಿಂಗ್ ಹಾಡಿದ ಹಾಡು ಮತ್ತು ನೇಪಾಳಿ ಕಲಾವಿದ ಸುಶಾಂತ್ ಖತ್ರಿ ನೃತ್ಯ ಸಂಯೋಜಿಸಿದ ಸಂಗೀತ ವೀಡಿಯೊವನ್ನು ನಿರ್ಮಿಸುವ ತನ್ನ ಕೊನೆಯ ಆಸೆಯನ್ನು ಪೂರೈಸುವಂತೆ ಬರೆದಿಟ್ಟಿದ್ದಾನೆ.
ಈ ಬಾಲಕ 11ನೇ ತರಗತಿಯಲ್ಲಿ ಓದುತ್ತಿದ್ದು, ರೈಲ್ವೆ ಹಳಿಯ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಝಾನ್ಸಿ ರಸ್ತೆ ಪೊಲೀಸ್ ಠಾಣೆ ಉಸ್ತುವಾರಿ ಸಂಜೀವ್ ನಯನ್ ಶರ್ಮಾ ಅವರು ತಿಳಿಸಿದ್ದಾರೆ.
ಹುಡುಗ ಬರೆದ ಆತ್ಮಹತ್ಯೆ ಪತ್ರ ಅವನ ದೇಹದೊಂದಿಗೆ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದು, ಆತ್ಮಹತ್ಯೆ ಪತ್ರದಲ್ಲಿ, ತನ್ನ ಮರಣದ ನಂತರ ಸಂಗೀತ ವೀಡಿಯೊವನ್ನು ಮಾಡಬೇಕು, ಅದರಲ್ಲಿ ಅರಿಜಿತ್ ಸಿಂಗ್ ಹಾಡಬೇಕು ಮತ್ತು ನೃತ್ಯವನ್ನು ನೇಪಾಳಿ ಕಲಾವಿದ ಸುಶಾಂತ್ ಖತ್ರಿ ನೃತ್ಯ ಸಂಯೋಜಿಸಬೇಕು ಎಂದು ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ ಬಾಲಕನ ಕೊನೆಯ ಆಸೆಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ ಎಂದು ಶರ್ಮಾ ಹೇಳಿದರು.