ಬೆಂಗಳೂರು, ಅ.11 (DaijiworldNews/HR): ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಣ್ಣ ಸುಳಿವು ಕೂಡಾ ನೀಡದೆ ಒಮ್ಮೆಲೇ ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದು, ಅವರು ವಿವೇಕನಗರದ ಇನ್ಫ್ರೆಂಟಿ ಚರ್ಚ್ಗೆ ಭೇಟಿ ನೀಡಿದ್ದಾರೆ.
ರಜನಿಕಾಂತ್ ಅವರು ಎಲ್ಲರಂತೆಯೇ ಚರ್ಚೆ ಆಗಮಿಸಿನ್ನು ನೋಡಿದ ಅಭಿಮಾನಿಗಳು ನಿಬ್ಬೆರಾಗಗಿದ್ದಂತು ನಿಜ. ರಜನಿಕಾಂತ್ ಅವರ ಮಗಳ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಈ ಚರ್ಚ್ಗೆ ಹರಕೆಯ ಕಟ್ಟಿಕೊಂಡು ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿರುವ ರಜನಿಕಾಂತ್ ಅವರ ಸ್ನೇಹಿತ ಇತ್ತೀಚೆಗೆ ನಿಧನರಾಗಿದ್ದು ಈ ಹಿನ್ನಲೆಯಲ್ಲಿ ತಲೈವ ಸ್ನೇಹಿತನ ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಸಂತೈಸಿ ವಿವೇಕನಗರದ ಇನ್ಫ್ರೆಂಟಿ ಚರ್ಚ್ ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.