ಬೆಂಗಳೂರು, ಅ.11 (DaijiworldNews/HR): ಒಬ್ಬ ಹಿಂದೂವಾಗಿ, ಕೇವಲ ಚುನಾವಣೆಗಳಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಬಾರದು. ಆದರೆ ಅದನ್ನು ನಿಯಮಿತವಾಗಿ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಭಾರತವು ಹಿಂದೂ ರಾಷ್ಟ್ರ ಆಗಿತ್ತು ಮತ್ತು ಮುಂದೆನೂ ಆಗಿರುತ್ತದೆ. ಮೊದಲು 'ಅಲ್ಪಸಂಖ್ಯಾತರ ತುಷ್ಟೀಕರಣ' ಮಾಡಿದ್ದಕ್ಕಾಗಿ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡ ಅವರು, ಪಕ್ಷವು ಈಗ ಹಿಂದೂಗಳು 'ಒಗ್ಗಟ್ಟಾಗಿದ್ದಾರೆ' ಎಂದು ತಿಳಿದಿದೆ ಮತ್ತು ಸಮುದಾಯವನ್ನು ಆಕರ್ಷಿಸಲು ಪೂಜೆಗಳನ್ನು ಮಾಡಲು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಲು ಪ್ರಾರಂಭಿಸಿದೆ ಎಂದರು.
ಇನ್ನು ಬಿಜೆಪಿ 'ಹಿಂದೂ ರಾಷ್ಟ್ರ' ಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಪದೇ ಪದೇ ಆರೋಪಿಸುತ್ತಿದ್ದು,ಕಳೆದ ತಿಂಗಳು, ಜೆಡಿ ಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಹಿಂದುತ್ವ ಮತ್ತು ಹಿಂದೂ ರಾಷ್ಟ್ರದ ಹೆಸರಿನಲ್ಲಿ ಯುವಕರನ್ನು 'ದಾರಿತಪ್ಪಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.