ಡೆಹ್ರಾಡೂನ್, ಅ.11 (DaijiworldNews/HR): ಉತ್ತರಾಖಂಡ್ನಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಸಾರಿಗೆ ಸಚಿವ ಯಶ್ ಪಾಲ್ ಆರ್ಯ ಹಾಗೂ ಪುತ್ರ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಯಶ್ ಪಾಲ್ ಆರ್ಯ ಅವರ ಪುತ್ರ ಸಂಜೀವ್ ಶಾಸಕರಾಗಿದ್ದು, ಈ ಇಬ್ಬರೂ ನಾಯಕರು ತಮ್ಮ ಬೆಂಬಲಿಗರೊಂದಿಗೆ ಹರೀಶ್ ರಾವತ್, ಕೆಸಿ ವೇಣುಗೋಪಾಲ್, ಸಂದೀಪ್ ಸುರ್ಜೆವಾಲ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು 2007 ರಿಂದ 2014 ಯಶ್ ಪಾಲ್ ಆರ್ಯ ಉತ್ತರಾಖಂಡ್ ನ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಜೊತೆಗೆ ಸ್ಪೀಕರ್, ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಮೊದಲಿಗೆ ಕಾಂಗ್ರೆಸ್ ನಲ್ಲಿ ಇದ್ದ ಅವರು 2017 ರ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಗೊಂಡಿದ್ದು, ಇದೀಗ ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ.