ನವದೆಹಲಿ, ಅ.11 (DaijiworldNews/PY): "ಯುವ ಹಿಂದೂ ಯುವಕ ಹಾಗೂ ಯುವತಿಯರನ್ನು ವಿವಾಹದ ನೆಪದಲ್ಲಿ ಮತಾಂತರ ಮಾಡುವುದು ತಪ್ಪು. ತಮ್ಮ ಧರ್ಮ ಹಾಗೈ ಸಂಪ್ರದಾಯಗಳ ಕುರಿತು ಯುವಕ, ಯುವತಿಯರಲ್ಲಿ ಹೆಮ್ಮೆ ಮೂಡಿಸುವ ಅವಶ್ಯಕತೆ ಇದೆ" ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಉತ್ತರಾಖಂಡ್ನಲ್ಲಿ ನಡೆದ ಆರ್ಎಸ್ಎಸ್ ಕಾರ್ಯಕರ್ತರ ಹಾಗೂ ಕುಟುಂಬ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಮ್ಮ ಮಕ್ಕಳನ್ನು ನಾವು ಪೋಷಿಸುವುದರ ಜೊತೆಗೆ ಮನೆಯಲ್ಲೇ ಅವರಿಗೆ ನಾವು ಧರ್ಮದ ಕುರಿತು ತಿಳಿಸಿಕೊಡುವ ಅವಶ್ಯಕತೆ ಇದೆ. ನಮ್ಮ ಧರ್ಮದ ಬಗ್ಗೆ ಸೇರಿದಂತೆ ನಮ್ಮ ಬಗ್ಗೆ, ನಮ್ಮ ಸಂಪ್ರದಾಯ ಹಾಗೂ ಪೂಜೆಗಳನ್ನು ಗೌರವಿಸುವ ಬಗ್ಗ ಹೇಳಿಕೊಡಬೇಕಾಗಿದೆ" ಎಂದಿದ್ದಾರೆ.
"ಹೇಗೆ ಮತಾಂತರ ನಡೆಯುತ್ತಿದೆ. ಹಿಂದು ಯುವಕ, ಯುವತಿಯರು ಇತರ ಧರ್ಮಗಳನ್ನು ವಿವಾಹದಂತಹ ಸಣ್ಣ ಸ್ವಾರ್ಥಕ್ಕಾಗಿ ಹೇಗೆ ಮತಾಂತರವಾಗುತ್ತಿದ್ದಾರೆ? ಈ ರೀತಿಯ ಕೆಲಸವನ್ನು ಯಾರು ಮಾಡುತ್ತಿದ್ದಾರೋ ಅದು ಸರಿಯಲ್ಲ. ಆದರೆ, ಅದು ಬೇರೆ ವಿಚಾರವಾಗಿದೆ" ಎಂದು ಹೇಳಿದ್ದಾರೆ.
"ಮತಾಂತರದ ಪ್ರಶ್ನೆ ಒಂದು ವೇಳೆ ಎದುರಾದಲ್ಲಿ ಅದಕ್ಕೆ ತಕ್ಕ ಉತ್ತರ ನೀಡಬೇಕು. ನಮ್ಮಲ್ಲಿ ಆ ಕುರಿತು ಗೊಂದಲ ಇರಬಾರದು. ಆ ರೀತಿಯಾಗಿ ನಾವು ನಮ್ಮ ಮಕ್ಕಳನ್ನು ಬೆಳೆಸುವುದು ಅವಶ್ಯಕ" ಎಂದು ತಿಳಿಸಿದ್ದಾರೆ.