ದೆಹಲಿ, ಅ.11 (DaijiworldNews/HR): ಭಾರತದಲ್ಲಿ ಕಳೆದ 17 ದಿನಗಳಲ್ಲಿ 15 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಲಾಗಿದ್ದು, ಸತತ ಏಳನೇ ದಿನವೂ ದೇಶದಲ್ಲಿ ಇಂಧನ ದರ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ಪೆಟ್ರೋಲ್ 31 ಪೈಸೆ ಏರಿಯಾಗಿ ಲೀಟರ್ಗೆ 108.08 ಆಗಿದೆ. ಡೀಸೆಲ್ ದರ ಲೀಟರ್ ಮೇಲೆ 37 ಪೈಸೆ ಹೆಚ್ಚಳವಾಗಿದ್ದು, ಲೀಟರ್ಗೆ 98.89 ಆಗಿದೆ.
ದೆಹಲಿಯಲ್ಲಿ ಪೆಟ್ರೋಲ್ 30 ಪೈಸೆ ಏರಿಕೆಯಾಗಿದ್ದು, ಲೀಟರ್ಗೆ 104.44 ಆಗಿದ್ದು, ಡೀಸೆಲ್ 35 ಪೈಸೆ ಏರಿಕೆಯಾಗಿ 93.17 ಆಗಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಮೇಲೆ 29 ಪೈಸೆ ಏರಿಕೆಯಾಗಿದ್ದು, 110.41 ಆಗಿದೆ. ಡೀಸೆಲ್ ಬೆಲೆ ಇಂದು ಲೀಟರ್ಗೆ 101.03 ಆಗಿದ್ದು, 37 ಪೈಸೆ ಹೆಚ್ಚಳವಾಗಿದೆ.