ಬೆಂಗಳೂರು, ಅ 11 (DaijiworldNews/MS): ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ರಾತ್ರೋರಾತ್ರಿ ಠಾಣೆ ನುಗ್ಗಿ ಮೂಡುಬಿದಿರೆ ಅನೈತಿಕ ಪೊಲೀಸ್ಗಿರಿ ಘಟನೆಯ ಆರೋಪಿಗಳನ್ನು ಕರೆತಂದಿದ್ದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ "ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ರಾತ್ರೋರಾತ್ರಿ ಠಾಣೆ ನುಗ್ಗಿ ಮೂಡುಬಿದಿರೆ ಅನೈತಿಕ ಪೊಲೀಸ್ಗಿರಿ ಘಟನೆಯ ಆರೋಪಿಗಳನ್ನು ಕರೆತಂದಿದ್ದೇಕೆ? ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು, ಎಸಗಿದವರ ರಕ್ಷಣೆಗೆ ನಿಲ್ಲುವ ಬಿಜೆಪಿಯ ಹಳೆಯ ಚಾಳಿ. ಕಾನೂನು ಸುವ್ಯವಸ್ಥೆಯ ಕುಸಿತಕ್ಕೆ ಹಾಗೂ ಬಿಜೆಪಿ ಶಾಸಕರ ಈ ವರ್ತನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಉತ್ತರಿಸಬೇಕು ಎಂದು ಒತ್ತಾಯಿಸಿದೆ.
ರಾಜ್ಯದಲ್ಲಿ ಅನೈತಿಕ ಪೊಲೀಸ್ಗಿರಿ ನಿರಾತಂಕವಾಗಿ ಮುಂದುವರೆದಿದೆ, ಬೆಂಗಳೂರಿನ ಘಟನೆಯ ಸಂದರ್ಭದಲ್ಲಿ 'ಅನೈತಿಕ ಪೊಲೀಸ್ಗಿರಿಯನ್ನು ಸಹಿಸುವುದಿಲ್ಲ' ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಸಿಎಂ & ಗೃಹಚಿವರು ಮೌನಕ್ಕೆ ಜಾರಿದ್ದಾರೆ. ಮುಖ್ಯಮಂತ್ರಿ ಅವರೇ, ನಿಮ್ಮ ಶಾಸಕ ಉಮಾಪತಿ ಕೋಟ್ಯಾನ್ ಆರೋಪಿಗಳ ಬೆಂಬಲಕ್ಕೆ ನಿಂತಿದ್ದಾರೆ, ಈಗೇನಂತೀರಿ? ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅನ್ಯ ಧರ್ಮಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು 'ನೈತಿಕ ಪೊಲೀಸ್ ಗಿರಿ' ಮತ್ತು ನಿಂದಿಸಿದ ಸಂಹಿತರಾಜ್ (36) ಮತ್ತು ಸಂದೀಪ್ ಪೂಜಾರಿ (34) ಎಂಬ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದರು.