ಶ್ರೀನಗರ, ಅ.11 (DaijiworldNews/PY): ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟ ಉಗ್ರನನ್ನು ಇಮ್ತಿಯಾಜ್ ಅಹ್ಮದ್ದಾರ್ ಎಂದು ಗುರುತಿಸಲಾಗಿದ್ದು, ಈತ ಲಷ್ಕರ್-ಇ-ತೋಯ್ಬಾದ ಬೆಂಬಲಿತ ನಿಷೇಧಿತ ಭಯೋತ್ಪಾದನೆ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ನೊಮದಿಗೆ ಸಂಬಂಧ ಹೊಂದಿದ್ದ. ಇತ್ತೀಚೆಗೆ ಬಂಡಿಪೋರಾದ ಶಹಗುಂದದಲ್ಲಿ ನಡೆದ ನಾಗರಿಕ ಹತ್ಯೆಯಲ್ಲಿ ಅಹ್ಮದ್ದಾರ್ ಭಾಗಿಯಾಗಿದ್ದ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಈ ಗುಂಡಿನ ಕಾಳಗೆ ಬಂಡಿಪೋರಾ ಜಿಲ್ಲೆಯ ಹಾಜಿನ್ ಏರಿಯಾದ ಗುಂಡ್ ಜಹಂಗೀರ್ನಲ್ಲಿ ನಡೆದಿದೆ. ಎನ್ಕೌಂಟರ್ನಲ್ಲಿ ಓರ್ವ ಉಗ್ರನನ್ನು ಸದೆಬಡಿಯಲಾಗಿದೆ ಎಂದು ಹೇಳಿದ್ದಾರೆ.
ಅನಂತ್ನಾಗ್ನ ವೆರಿನಾಗ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ಪೊಲೀಸ್ ಸಿಬ್ಬಂದಿಗೂ ಗಾಯವಾಗಿತ್ತು. ಓರ್ವ ಉಗ್ರನೂ ಮೃತಪಟ್ಟಿದ್ದಾನೆ.
ಸ್ಥಳದಿಂದ ಪಿಸ್ತೂಲ್ ಹಾಗೂ ಗ್ರೆನೇಡ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.