ಹೊಸದುರ್ಗ, ಅ 11 (DaijiworldNews/MS): ಹೊಸದುರ್ಗ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದಲಿ ಮತಾಂತರಗೊಂಡಿದ್ದ ಹಿಂದೂ ಧರ್ಮದ 8 ಮಂದಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ರವರ ಮನವೊಲಿಕೆಯಿಂದ ಶ್ರೀ ಹಾಲು ರಾಮೇಶ್ವರ ದೇವಸ್ಥಾನದಲ್ಲಿ ಸ್ವಧರ್ಮಕ್ಕೆ ಮರಳಿ ಬಂದಿದ್ದಾರೆ.
ಹಾಲು ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೇಸರಿ ಶಾಲು ಹಾಕಿ, ತೀರ್ಥ- ಪ್ರಸಾದ, ಮಂಜುನಾಥ ಸ್ವಾಮಿಯ ಫೋಟೋ ನೀಡಿ ಸ್ವಾಗತಿಸುವ ಮೂಲಕ ಹಿಂದೂ ಧರ್ಮಕ್ಕೆ ವಾಪಸ್ ಬರಮಾಡಿಕೊಳ್ಳಲಾಗಿದೆ.
ಬಲ್ಲಾಳ ಸಮುದ್ರದ ನಾರಾಯಣಪ್ಪ,ಮಂಜಮ್ಮ, ಪ್ರದೀಪ, ಗೀತಾ, ಗೌರಮ್ಮ, ಅಣ್ಣಪ್ಪ, ಕುಸುಮಮ್ಮ ಮತ್ತು ಕುಮಾರ ಎಂಟು ಜನ ಕೇರಳದಲ್ಲಿ ಕಳೆದ ನಾಲ್ಕು ವರ್ಷದ ಹಿಂದೆ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು.
ಆ ಬಳಿಕ ಮಾತನಾಡಿದ ಅವರು "ನನ್ನ ಕ್ಷೇತ್ರದಲ್ಲಿ ಸಾಕಷ್ಟು ಕುಟುಂಬಗಳನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಮಿಷನರಿಗಳ ವಿರುದ್ಧ ನಾನು ಸಿಡಿದೇಳಬೇಕಾಯಿತು. ಆದರೆ ಹುಟ್ಟಿನಿಂದಲೇ ಯಾರು ಕ್ರೈಸ್ತ ಧರ್ಮದಲ್ಲಿರುವವರ ವಿಚಾರದಲ್ಲಿ ನನಗೆ ಸೋದರತೆಯ ಭಾವವಿದೆ " ಎಂದು ಹೇಳಿದರು.