ಬೆಂಗಳೂರು, ಅ.10 (DaijiworlNews/HR): ರಾಜ್ಯದ ಉಭಯ ಸದನಗಳಲ್ಲಿ ಆನ್ಲೈನ್ ಗೇಮ್ ಮಿಷೇಧಿಸುವಂತೆ ಈಗಾಗಲೇ ಪ್ರತಿಪಕ್ಷದ ನಾಯಕರು, ಸದಸ್ಯರು ಚರ್ಚೆ ನಡೆಸಿದ್ದು, ರಾಜ್ಯದಲ್ಲಿ ಇಂದಿನಿಂದ ಆನ್ಲೈನ್ ಗೇಮ್ಗಳನ್ನು ನಿಷೇಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಇಂದಿನಿಂದ ಡ್ರೀಮ್ 11 ಹಾಗೂ ಫಸ್ಟ್ ಗೇಮ್, ಗೇಮ್ಜಿ ಎಂಬ ಪ್ರಸಿದ್ಧ ಆನ್ಲೈನ್ ಜೂಜಾಟದ ಆಯಪ್ ಸೇರಿದಂತೆ ಹಲವು ಫ್ಯಾಂಟಸಿ ಗೇಮ್ ಆಯಪ್ಗಳನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.
ಈ ಕುರಿತು ಹೈಕೋರ್ಟ್ಗೆ ರಿಟ್ ಅರ್ಜಿಯೂ ಸಲ್ಲಿಕೆಯಾಗಿದ್ದು, ಆನ್ಲೈನ್ ಬೆಟ್ಟಿಂಗ್ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್ ಹಲವು ಬಾರಿ ತಾಕೀತು ಮಾಡಿತ್ತು.
ಆನ್ಲೈನ್ ಮೂಲಕ ಗೇಮ್ ಆಡುವುದು, ಬೆಟ್ಟಿಂಗ್, ಟೋಕನ್ ಮೂಲಕ ಹಣದ ಆಟ ಆಡುವುದು, ಎಲೆಕ್ಟ್ರಾನಿಕ್ ಮನಿ, ಯಾವುದೇ ಆಟಕ್ಕೆ ಆನ್ಲೈನ್ ಮೂಲಕ ಹಣದ ವರ್ಗಾವಣೆ ಮಾಡುವುದಕ್ಕೆ ಇನ್ನು ಮುಂದೆ ನಿಷೇಧವಿರಲಿದ್ದು, ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಕರ್ನಾಟಕ ಪೊಲಿಸ್ ಕಾಯ್ದೆ ಸೆಕ್ಸನ್ 2ಕ್ಕೆ ತಿದ್ದುಪಡಿ ತರಲಾಗಿದ್ದು ಸೆಕ್ಸನ್ 78ಎ/3 ಪ್ರಕಾರ, ಈಗಿರುವ ಒಂದು ತಿಂಗಳ ಜೈಲು ಶಿಕ್ಷೆ ಪ್ರಮಾಣವನ್ನು 6 ತಿಂಗಳುಗಳಿಗೆ ವಿಸ್ತರಿಸಲಾಗಿದ್ದು, , ಒಂದು ವರ್ಷದ ಶಿಕ್ಷೆ ಪ್ರಮಾಣವನ್ನು 3 ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈಗಿರುವ 500 ರೂ. ದಂಡ 10 ಸಾವಿರ ರೂ.ಗೆ ಹೆಚ್ಚಳ, ಈಗಿರುವ 1,000 ರೂ. ದಂಡವನ್ನು 1 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.