ನವದೆಹಲಿ, ಅ.10 (DaijiworldNews/PY): ಲಖಿಂಪುರ್ ಖೇರಿ ಘಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೇತೃತ್ವದ ಏಳು ಸದಸ್ಯರನ್ನೊಳಗೊಂಡ ಕಾಂಗ್ರೆಸ್ ಪಕ್ಷದ ನಿಯೋಗ ಸಮಗ್ರ ಮನವಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲು ಅಪಾಯಿಂಟ್ಮೆಂಟ್ ಅನ್ನು ಕೋರಿದೆ.
"ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶದ ಹೊರತಾಗಿ ರೈತರ ಸಾವಿಗೆ ಸಂಬಂಧಪಟ್ಟಂತೆ ಆರೋಪಿಗಳು ಅಥವಾ ಸಚಿವರ ವಿರುದ್ದ ಯಾವುದೇ ಸರಿಯಾದ ಕ್ರಮ ತೆಗೆದುಕೊಂಡಿಲ್ಲ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ರೈತರ ಮೇಲೆ ಅಜಯ್ ಮಿಶ್ರಾ ಅವರ ಪುತ್ರ ಚಲಾಯಿಸುತ್ತಿದ್ದ ಕಾರು ಹರಿದ ಘಟನೆಯನ್ನು ಪ್ರತ್ಯೇಕ್ಷವಾಗಿ ಕಂಡ ರೈತರು ಹೇಳುತ್ತಿರುವುದಾಗಿ ಅವರು ಹೇಳಿದ್ಧಾರೆ.
ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ 8 ಮಂದಿ ಸಾವನ್ನಪ್ಪಿದ್ದು, ಅನೇಕ ಮಂದಿಗೆ ಗಾಯಾಗಳಾಗಿತ್ತು.