ಲಕ್ನೋ, ಅ.10 (DaijiworlNews/HR): ರೈತರ ಪ್ರತಿಭಟನೆಯ ವೇಳೆ ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರವನ್ನು ಹಿಂದೂ ಮತ್ತು ಸಿಖ್ ಘರ್ಷಣೆಯನ್ನಾಗಿ ಪರಿವರ್ತಿಸಲು ಸಂಚು ಹೂಡಲಾಗಿತ್ತು ಎಂದು ಬಿಜೆಪಿ ನಾಯಕ ವರುಣ್ ಗಾಂಧಿ ಆರೋಪಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಇದು ಅನೈತಿಕ ಮತ್ತು ಸುಳ್ಳು ನಿರೂಪಣೆ ಮಾತ್ರವಲ್ಲ, ಇಂತಹ ತಪ್ಪುಗಳನ್ನು ಸೃಷ್ಟಿಸಬಾರದು. ನಾವು ರಾಷ್ಟ್ರೀಯ ಏಕತೆಯ ಮೇಲೆ ಸಣ್ಣ ರಾಜಕೀಯ ಲಾಭಗಳನ್ನು ಪಡೆಯಲು ಮುಂದಾಗಬಾರದು" ಎಂದಿದ್ದಾರೆ.
ಇನ್ನು ರೈತರ ಮೇಲೆ ಕಾರು ಹತ್ತಿಸಿದ ಆರೋಪದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಅವರನ್ನು ವಿಶೇಷ ತನಿಖಾ ತಂಡ ಸತತ 12 ಗಂಟೆಗಳ ಕಾಲ ತನಿಖೆ ನಡೆಸಿದ ಬಳಿಕ ಬಂಧಿಸಲಾಗಿತ್ತು.
ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ 8 ಮಂದಿ ಸಾವನ್ನಪ್ಪಿದ್ದು, ಅನೇಕ ಮಂದಿಗೆ ಗಾಯಾಗಳಾಗಿತ್ತು.