ಹೊಸದಿಲ್ಲಿ,ಅ.10 (DaijiworlNews/HR): "ನಾನು ಇದುವರೆಗೆ ನೋಡಿದ್ದರಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಪ್ರಜಾಪ್ರಭುತ್ವವಾದಿ ನಾಯಕ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ 20 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಅಮಿತ್ ಶಾ, ಪಿಎಂ ಆಡಳಿತ ಶೈಲಿಯನ್ನು ಶ್ಲಾಘಿಸಿದ್ದು, "ಮೋದಿ ಅವರ ಜೊತೆ ವಿರೋಧ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ನಾನು ಅವರಂತಹ ಕೇಳುಗನನ್ನು ಇದುವರೆಗೆ ಭೇಟಿ ಮಾಡಿಲ್ಲ" ಎಂದರು.
ಯಾವುದೇ ವಿಷಯದ ಬಗ್ಗೆ ಸಭೆ ಇರಲಿ, ಮೋದಿ ಅವರು ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಾರೆ ಮತ್ತು ಎಲ್ಲರ ಮಾತನ್ನೂ ತಾಳ್ಮೆಯಿಂದ ಕೇಳುತ್ತಾರೆ" ಎಂದರು.
ಇನ್ನು ಮೋದಿ ಅವರನ್ನು ಅತ್ಯಂತ ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಸುತ್ತಾರೆ. ಒಂದು ವೇದಿಕೆಯಲ್ಲಿ ಏನು ಚರ್ಚಿಸಲಾಗಿದೆ ಎಂಬುದನ್ನು ಸಾರ್ವಜನಿಕ ವಲಯಕ್ಕೆ ಸೋರಿಕೆ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ತಪ್ಪು ಗ್ರಹಿಕೆ ಇದೆ. ಆದರೆ ಅದು ಹಾಗಲ್ಲ, ಅವರು ಯಾವುದೇ ವಿಷಯದ ಬಗ್ಗೆ ಸಭೆ ಇರಲಿ, ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಾರೆ ಮತ್ತು ಎಲ್ಲರ ಮಾತನ್ನೂ ತಾಳ್ಮೆಯಿಂದ ಕೇಳುತ್ತಾರೆ" ಎಂದು ಹೇಳಿದ್ದಾರೆ.