ಲಖಿಂಪುರ ಖೇರಿ, ಅ.10 (DaijiworlNews/HR): ಉತ್ತರಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಸ್ಥಳೀಯ ಕೋರ್ಟ್ ಆದೇಶಿಸಿರುವುದಾಗಿ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಆಶಿಶ್ ಮಿಶ್ರಾ ಅಪರಾಧ ವಿಭಾಗದಲ್ಲಿ ಶನಿವಾರ ಹಾಜರಾಗಿದ್ದು, ಅವರನ್ನುಎಸ್ಐಟಿ ಅಧಿಕಾರಿಗಳು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿ ಬಳಿಕ ತಡರಾತ್ರಿ ಅವರನ್ನು ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿದರು.
ಇನ್ನು ಕೋರ್ಟ್ಗೂ ಹಾಜರುಪಡಿಸುವುದಕ್ಕೂ ಮೊದಲು ವೈದ್ಯರ ತಂಡವೊಂದು ಆಶಿಶ್ ಮಿಶ್ರಾ ಅವರ ಆರೋಗ್ಯ ತಪಾಸಣೆ ನಡೆಸಿರುವುದಾಗಿ ಎಂದು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಎಸ್.ಪಿ.ಯಾದವ್ ತಿಳಿಸಿದ್ದಾರೆ.
ಅಕ್ಟೋಬರ್. 11ರಂದು ಬೆಳಿಗ್ಗೆ 11ಗಂಟೆಗೆ ಆಶಿಶ್ ಮಿಶ್ರಾ ಅವರ ಈ ಅರ್ಜಿ ವಿಚಾರಣೆಯನ್ನು ಕೋರ್ಟ್ ನಡೆಸಲಿದೆ ಎನ್ನಲಾಗಿದೆ.