ಕಾಶ್ಮೀರ, ಅ.10 (DaijiworlNews/HR): ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದಂತೆ 16 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎಎನ್ಐ) ದಾಳಿ ನಡೆಸಿದೆ.
ಸಾಂದರ್ಭಿಕ ಚಿತ್ರ
ಐಸಿಸ್-ವಾಯ್ಸ್ ಆಫ್ ಹಿಂದ್ ಪ್ರಕರಣದ ತನಿಖೆಯ ಭಾಗವಾಗಿ ಶ್ರೀನಗರ, ಅನಂತನಾಗ್, ಕುಲ್ಗಾಮ್ ಮತ್ತು ಬಾರಾಮುಲ್ಲಾದ ಒಂಬತ್ತು ಸ್ಥಳಗಳಲ್ಲಿ ಭಯೋತ್ಪಾದನಾ ನಿಗ್ರಹ ಸಂಸ್ಥೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಇಂದು ಬೆಳ್ಳಗ್ಗೆ ರಸ್ತೆ ನಿರ್ಮಾಣ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಆರಿಪೋರಾ ಝವಾನ್ ನಿವಾಸಿ ನಯೀಮ್ ಅಹ್ಮದ್ ಭಟ್ ಅವರ ಮನೆಯ ಮೇಲೆ ಎನ್ ಐಎ ದಾಳಿ ಮಾಡಿದು, ಬಾಘಿ ನಂದ್ ಸಿಂಗ್ ಚಟ್ಟಬಲ್ ನಲ್ಲಿರುವ ಮುಷ್ತಾಕ್ ಅಹ್ಮದ್ ದಾರ್ ಅವರ ನಿವಾಸದ ಮೇಲೆ ಎರಡನೇ ದಾಳಿ ನಡೆಸಲಾಯಿತು. ದಾಳಿಯ ಸಮಯದಲ್ಲಿ ಶಂಕಿತರಿಂದ ಒಟ್ಟು ಐದು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಪಿಎಸ್ ಶೆರ್ಗರ್ಹಿಯ ಸೋಲಿನಾ ಪಯೀನ್ ನಿವಾಸಿ ಸುಹೈಲ್ ಅಹ್ಮದ್ ಭಟ್ ಅವರ ಮನೆಯ ಮೇಲೆ ಎಎನ್ಐ ದಾಳಿ ನಡೆಸಿದ್ದು, ತಾಹಿರ್ ಅಹ್ಮದ್ ನಜರ್ ಅವರ ನಿವಾಸದಿಂದ ಬಹಾವುದ್ದೀನ್ ಸಾಹಬ್ ನೊವಾಟ್ಟಾ ಅವರನ್ನು ವಶಕ್ಕೆ ತೆಗೆದುಕೊಂಡಿದೆ ಮತ್ತು ಅವರಿಂದ ಒಂದು ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.