ನವದೆಹಲಿ, ಅ.10 (DaijiworlNews/HR): ಭಾರತದಲ್ಲಿ ಕಳೆದ 16 ದಿನಗಳಲ್ಲಿ 14 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಲಾಗಿದ್ದು, ಸತತ 6 ದಿನಗಳಿಂದ ಇಂಧನ ದರ ಏರಿಕೆಯಾಗುತ್ತಿದೆ.
ಸಾಂದರ್ಭಿಕ ಚಿತ್ರ
ಭಾನುವಾರ ಪೆಟ್ರೋಲ್ ದರ ಪ್ರತಿ ಲೀಟರ್ ಮೇಲೆ 30 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಮೇಲೆ 35 ಪೈಸೆ ಹೆಚ್ಚಳವಾಗಿದ್ದು, ಕಳೆದ ಆರು ದಿನಗಳಿಂದ ಇಂಧನ ದರ ಸರಾಸರಿ 25-30 ಪೈಸೆಯಂತೆ ಏರಿಕೆಯಾಗುತ್ತಿದೆ.
ಇನ್ನು ಕಳೆದ 12 ದಿನಗಳಲ್ಲಿ ಪೆಟ್ರೋಲ್ 2.75 ರುಪಾಯಿ, ಡೀಸೆಲ್ 3.95 ರುಪಾಯಿಯಷ್ಟು ಬೆಲೆ ಹೆಚ್ಚಳವಾಗಿದ್ದು, ಸೆ.5ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸರಾಸರಿ 15 ರಿಂದ 19 ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು. ನಂತರ ಇಂಧನ ಬೆಲೆ ಏರಿಕೆಯಾಗುತ್ತಿದೆ.
ಮೇ 4ರಿಂದ ಇಂದಿನವರೆಗೆ ಒಟ್ಟು 46 ಬಾರಿ ಪೆಟ್ರೋಲ್ ಹಾಗೂ ಡೀಸೆಲ್ 41 ಬಾರಿ ಏರಿಕೆಯಾಗಿದ್ದು, ಮೇ 4ರಿಂದ ಪೆಟ್ರೋಲ್ 11.15 ರು ಪ್ರತಿ ಲೀಟರ್ ಹಾಗೂ ಡೀಸೆಲ್ 10.80 ರು ಪ್ರತಿ ಲೀಟರ್ ಆಗಿದೆ.
ಬೆಂಗಳೂರುರಿನಲ್ಲಿ ಇಂದು ಪೆಟ್ರೋಲ್ 107.77ರೂ- ಡೀಸೆಲ್ 98. 52ರೂ ಆಗಿದೆ.