ಲಕ್ನೋ, ಅ.09 (DaijiworldNews/HR): ಉತ್ತರ ಪ್ರದೇಶದ ಲಿಖಿಂಪುರ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ 'ಆಶಿಶ್ ಮಿಶ್ರಾ' ಅವರನ್ನು ವಿಶೇಷ ತನಿಖೆಯ ಸುದೀರ್ಘ 8 ಗಂಟೆಗಳ ವಿಚಾರಣೆಯ ನಂತರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಶಿಶ್ ಮಿಶ್ರಾ ಬಂಧನದ ಬಗ್ಗೆ ಪೊಲೀಸ್ ಅಧಿಕಾರಿಗಳು ಇನ್ನೂ ಅಧಿಕೃತ ಘೋಷಣೆ ಮಾಡಲಿಲ್ಲ. ಇದಲ್ಲದೆ ವಿಚಾರಣೆಯ ಬಳಿಕ ಆಶಿಶ್ ಮಿಶ್ರಾ ವಿರುದ್ಧ ದಾಖಲಾಗಿರುವ ಎಫ್ಐಆರ್ನಲ್ಲಿ ಐಪಿಸಿಯ ಇನ್ನೂ ಕೆಲವು ವಿಭಾಗಗಳನ್ನು ಸೇರಿಸುವಂತೆ ಎಸ್ಐಟಿ ಜಿಲ್ಲಾ ಪೊಲೀಸರಿಗೆ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.
ಆಶಿಶ್ ಮಿಶ್ರಾ ಅವರ ವಿಚಾರಣೆಯು ಲಿಖಿಂಪುರ್ ಅಪರಾಧ ಶಾಖೆಯ ಆರು ಸದಸ್ಯರ ಎಸ್ಐಟಿಯಿಂದ ಶನಿವಾರ ರಾತ್ರಿವರೆಗೂ ನಡೆದಿದೆ.
ಇನ್ನು ನಾಲ್ಕು ರೈತರು ಸೇರಿದಂತೆ ಎಂಟು ಜೀವಗಳನ್ನು ಬಲಿ ತೆಗೆದುಕೊಂಡ ಹಿಂಸಾಚಾರದ ಬಗ್ಗೆ ಆಶಿಶ್ ಅವರನ್ನು ಪ್ರಶ್ನಿಸಲು 40 ಪ್ರಶ್ನೆಗಳ ಪಟ್ಟಿಯನ್ನು ಎಸ್ಐಟಿ ಸಿದ್ಧಪಡಿಸಿದ್ದರಿಂದ ಆತನ ವಿಚಾರಣೆ ಆರಂಭವಾಯಿತು.