ಬೆಂಗಳೂರು, ಅ.09 (DaijiworldNews/HR): ಅಶೋಕ್ ಮನಗೂಳಿಯವರನ್ನು ನಾವು ಹೈಜಾಕ್ ಮಾಡಿಲ್ಲ. ಅವರಾಗಿಯೇ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವುದಾಗಿ ಹೇಳಿದರು. ನಮ್ಮ ಪಕ್ಷಕ್ಕೆ ಬರುವವರಿಗೆ ನಾವು ಬೇಡ ಎನ್ನಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಬೇಕಿದ್ದ ಅಶೋಕ್ ಮನಗೂಳಿ ಅವರನ್ನು ಕಾಂಗ್ರೆಸ್ ಹೈಜಾಕ್ ಮಾಡಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, "ಕುಮಾರಸ್ವಾಮಿಯವರು ನೋವಿನಿಂದ ಮಾತನಾಡುತ್ತಿದ್ದಾರೆ, ನಮ್ಮ ಪಕ್ಷದವರು ಕಾಂಗ್ರೆಸ್ ಗೆ ಹೋಗಿ ಅಭ್ಯರ್ಥಿಯಾದರಲ್ಲ ಎಂಬ ನೋವು ಅವರಿಗಿದೆ. ಆದರೆ ಮನಗೂಳಿಯವರನ್ನು ನಾವು ಹೈಜಾಕ್ ಮಾಡಿಲ್ಲ. ಅವರಾಗಿಯೇ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವುದಾಗಿ ಹೇಳಿದರು. ನಮ್ಮ ಪಕ್ಷಕ್ಕೆ ಬರುವವರಿಗೆ ನಾವು ಬೇಡ ಎನ್ನಲ್ಲ" ಎಂದರು.
ಇನ್ನು "ಅಶೋಕ್ ಮನಗೂಳಿ ನಮ್ಮನ್ನು ಭೇಟಿಯಾಗಿದ್ದರು. ಈ ವಿಚಾರ ನಮಗೆ ಹಾಗೂ ಮನಗೂಳಿ ಪುತ್ರ ಅಶೋಕ್ ಗೂ ಗೊತ್ತಿದ್ದು, ಈ ವಿಚಾರವನ್ನು ನಾವು ಬಹಿರಂಗವಾಗಿ ಹೇಳಿದ್ದೇವೆ ಹೊರತು ಗೌಪ್ಯವಾಗಿ ಹೇಳಿಲ್ಲ. ಇದರಲ್ಲಿ ಸುಳ್ಳು ಹೇಳುವ ಪ್ರಶ್ನೆ ಬರಲ್ಲ. ಸಿದ್ದರಾಮಯ್ಯ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಗತ್ಯವಿದ್ದರೆ ಅಶೋಕ್ ಮನಗೂಳಿ ಅವರನ್ನು ಕೇಳಿ" ಎಂದು ಹೇಳಿದ್ದಾರೆ.