ಲಕ್ನೋ, ಅ.09 (DaijiworldNews/PY): "ಚುನಾವಣೆಗಿಂತ ಆರು ತಿಂಗಳ ಮೊದಲು ಮಾಧ್ಯಮ ಸಂಸ್ಥೆಗಳು ಹಾಗೂ ಇತರೆ ಏಜೆನ್ಸಿಗಳು ಪೂರ್ವ ಸಮೀಕ್ಷೆ ನಡೆಸದಂತೆ ನಿಷೇಧ ಹೇರಬೇಕು" ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
"ಪೂರ್ವ ಸಮೀಕ್ಷೆ ನಡೆಸದಂತೆ ನಿಷೇಧಿಸುವುದರಿಂದ ಚುನಾವಣೆ ನಡೆಯುವ ರಾಜ್ಯಗಳ ಮೇಲೆ ಸಮೀಕ್ಷೆಗಳು ಪ್ರಭಾವ ಬೀರುವುದನ್ನು ತಡೆಯಬಹುದು. ಈ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ಶೀಘ್ರವೇ ಪತ್ರ ಬರೆಯುತ್ತೇನೆ" ಎಂದಿದ್ದಾರೆ.
"ಚುನಾವಣಾ ಸಮೀಕ್ಷೆಯಿಂದ ಗಳಿಸುವ ಮಾಧ್ಯಮ ಸಂಸ್ಥೆಗಳು ಹಾಗೂ ಇತರೆ ಏಜೆನ್ಸಿಗಳಿಗೆ ಚುನಾವಣೆಗಿಂತ ಆರು ತಿಂಗಳ ಮೊದಲು ಸಮೀಕ್ಷೆ ಮಾಡದಂತೆ ನಿಷೇಧ ಹೇರಬೇಕು" ಎಂದು ಆಗ್ರಹಿಸಿದ್ದಾರೆ.
"ಉತ್ತರಪ್ರದೇಶದಲ್ಲಿ ಮತದಾರರು ರಾಜ್ಯದಲ್ಲಿ ಅಧಿಕಾರವನ್ನು ಬದಲಾಯಿಸುವ ಸಂಬಂಧ ತಮ್ಮ ಮನಸ್ಸು ಪರಿವರ್ತನೆ ಮಾಡಿಕೊಳ್ಳಬೇಕಿದೆ" ಎಂದಿದ್ದಾರೆ.