ಚಿಕ್ಕಮಗಳೂರು, ಅ.09 (DaijiworldNews/HR): ಕಾಂಗ್ರೆಸ್ಸಿಗರಲ್ಲಿ ಇರುವ ಗಟ್ಟಿತನ ಬಿಜೆಪಿಯವರಲ್ಲಿ ಇಂದು ಕಾಣುತ್ತಿಲ್ಲ. ಹಿಂದೂಗಳು ನಿಮ್ಮನ್ನು ಗೆಲ್ಲಿಸಿದ್ದಾರೆ ಎನ್ನುವುದು ನೆನಪಿರಲಿ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, "ಸಚಿವರು, ಶಾಸಕರ ಪತ್ನಿಯರು ಬುರ್ಖಾ ಧರಿಸಿ ಮುಸ್ಲಿಮರ ಬೀದಿಗೆ ಹೋದರೆ, ಒಂದು ಓಟ್ ಬೀಳಲ್ಲ. ಬಿಜೆಪಿಯವರು ಓಟಿಗಾಗಿ ಸೆಕ್ಯೂಲರ್ ಆಗಲು ಹೊರಟಿದ್ದಾರೆ" ಎಂದರು.
ಇನ್ನು "ರಾಜ್ಯದಲ್ಲಿ ದೇವಸ್ಥಾನ ಕೆಡವಿದ್ದು, ಗಣೇಶೋತ್ಸವಕ್ಕೆ ಅವಕಾಶ ಕಲ್ಪಿಸದಿದ್ದಿರುವುದು, ದತ್ತಪೀಠ ವಿಚಾರದಲ್ಲಿ ತೆಗೆದುಕೊಂಡ ಕ್ರಮ ನೋಡಿದರೆ ಬಿಜೆಪಿಯವರು ಓಟಿಗಾಗಿ ಸೆಕ್ಯೂಲರ್ ಆಗಲು ಹೊರಟಿದ್ದಾರೆ ಎಂದು ಅನ್ನಿಸುತ್ತದೆ" ಎಂದು ವಾಗ್ದಾಳಿ ನಡೆಸಿದರು.