ಗದಗ, ಅ.09 (DaijiworldNews/PY): "ಮಾಜಿ ಪ್ರಧಾನಿ ದೇವೇಗೌಡ ಅವರ ಹುಟ್ಟುವ ಮುನ್ನವೇ ಆರ್ಎಸ್ಎಸ್ ಅಸ್ತಿತ್ವದಲ್ಲಿತ್ತು. ಹಾಗಾಗಿ ದೇವೇಗೌಡರ ಮೂಲಕ ಆರ್ಎಸ್ಎಸ್ಗೆ ಪ್ರಭಾವ ಬೆಳೆಸುವ ಅಗತ್ಯ ಇಲ್ಲ" ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರ್ಎಸ್ಎಸ್ಗೆ ದೇವೇಗೌಡರ ಮೂಲಕ ವಿಶೇಷ ಪ್ರಭಾವ ಬೇಳೆಸುವ ಅಗತ್ಯ ಇಲ್ಲ. ದೇವೇಗೌಡರು ಹುಟ್ಟುವ ಮುನ್ನ ಆರ್ಎಸ್ಎಸ್ ಅಸ್ತಿತ್ವದಲ್ಲಿದೆ. ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಸಂತಸವಾಗಿ ರಾಜಕಾರಣ ಮಾಡಲಿ ಎಂದು ಲೇವಡಿ" ಮಾಡಿದ್ದಾರೆ.
"ರಾಜ್ಯದ ಜನ ಜೆಡಿಎಸ್ ಅನ್ನು ಮರೆಯುತ್ತಿದ್ದಾರೆ. ಮುಸ್ಲಿಂಮರನ್ನು ಸಂತೃಪ್ತಿಪಡಿಸಿದಾಗೂ ಆಯಿತು, ಆರ್ಎಸ್ಎಸ್ ಕುರಿತು ಮಾತನಾಡಿದರೆ ಪ್ರಚಾರ ಸಿಗುತ್ತದೆ ಎನ್ನುವ ಭ್ರಮೆಯಲ್ಲಿ ಜೆಡಿಎಸ್ ಅನ್ನು ಟೀಕಿಸುತ್ತಿದೆ" ಎಂದಿದ್ದಾರೆ.
"ಕುಮಾರಸ್ವಾಮಿ ಎಲ್ಲಿ? ಆರ್ಎಸ್ಎಸ್ ಎಲ್ಲಿ? ಕಾಶ್ಮಿರ ಪಂಡಿತರ ಸಾವಿಗೆ ಆರ್ಎಸ್ಎಸ್ ಕಾರಣ ಎನ್ನುತ್ತಾರೆ. ಇಷ್ಟು ಕೀಳು ಮಟ್ಟದ ರಾಜಕಾರಣಕ್ಕೆ ಕುಮಾರಸ್ವಾಮಿ ಇಳೀತಾರೆ ಎಂದುಕೊಂಡಿರಲಿಲ್ಲ. ಭಗವಂತ ಕುಮಾರಸ್ವಾಮಿಗೆ ಬುದ್ಧಿ ಕೊಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.