ಬೆಂಗಳೂರು, ಅ.09 (DaijiworldNews/PY): "ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ನಿಯಂತ್ರಿಸಲು ಅವರ ಆಪ್ತನ ಮನೆ ಮೇಲೆ ಐಟಿ ದಾಳಿ ನಡೆದಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಎಸ್ವೈ ಅವರ ಆಪ್ತನ ಮನೆ ಮೇಲೆ ಐಟಿ ದಾಳಿ ನಡೆದ ಹಿಂದೆ ಒಳರಾಜಕೀಯ ಇದೆ" ಎಂದಿದ್ದಾರೆ.
"ಬಿಎಸ್ವೈ ಅವರನ್ನು ನಿಯಂತ್ರಿಸಲು ಈ ದಾಳಿ ನಡೆದಿದೆ. ಎಲ್ಲವನ್ನೂ ದೆಹಲಿಯಿಂದಲೇ ನಿಯಂತ್ರಿಸುತ್ತಿದ್ದಾರೆ. ಬಿಎಸ್ವೈ ಅವರನ್ನು ನಿಯಂತ್ರಿಸವು ಉದ್ದೇಶದಿಂದ ಅವರ ಆಪ್ತ ಉಮೇಶ್ ಅವರ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಅಧಿಕೃತವಾಗಿ ಹೇಳಿಕೆ ನೀಡುವ ತನಕ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಹೇಳಿದ್ದಾರೆ.
"ಯಾರ್ಯಾರು ಹೊಟೇಲ್ನಲ್ಲಿ ಕುಳಿತು ಸಭೆ ನಡೆಸಿದರು. ಏನು ಮಾಡಿದ್ದಾರೆ ಎನ್ನುವುದು ತಿಳಿದಿದೆ. ಅವರ ಮೇಲೂ ಕೂಡಾ ಆದಾಯ ಇಲಾಖೆಯಿಂದ ದಾಳಿ ಆಗಬೇಕಲ್ಲವೇ?" ಎಂದು ಪರೋಕ್ಷವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಬಾಂಬ್ ಸಿಡಿಸಿದ್ದಾರೆ.