ಶಿವಮೊಗ್ಗ, ಅ.09 (DaijiworldNews/PY): ಆರ್ಎಸ್ಎಸ್ ವಿಚಾರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, "ನಾನು ಹೆಚ್ಡಿಕೆ ಅವರೊಂದಿಗೆ ಮಾತನಾಡುತ್ತೇನೆ" ಎಂದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕುಮಾರಸ್ವಾಮಿ ಅವರು ಬಾಯಿ ತಪ್ಪಿ ಮಾತನಾಡಿದ್ದಾರೆ. ಅವರಿಗೆ ಏನೋ ತಪ್ಪು ಗ್ರಹಿಕೆ ಆಗಿರಬಹುದು. ಹಾಗಾಗಿ ಅವರೊಂದಿಗೆ ನಾನೇ ಖುದ್ದಾಗಿ ಮಾತನಾಡುತ್ತೇನೆ" ಎಂದು ತಿಳಿಸಿದ್ದಾರೆ.
"ದೇಶದಲ್ಲಿರುವ ನಾಲ್ಕು ಸಾವಿರ ಐಎಎಸ್ ಅಧಿಕಾರಿಗಳು ಆರ್ಎಸ್ಎಸ್ ಕಾರ್ಯಕರ್ತರು. ಆರ್ಎಸ್ಎಸ್ ಬಗ್ಗೆ ನಾನು ನೀಡಿದ ಹೇಳಿಕೆಗಳಿಗೆ ಬಹಿರಂಗ ಚರ್ಚೆಗೆ ಸಿದ್ದ. ಈ ಬಗ್ಗೆ ಚರ್ಚಿಸಲು ಬಿಜೆಪಿ ನಾಯಕರು ಬರಲಿ" ಎಂದು ಹೆಚ್ಡಿಕೆ ಸವಾಲು ಹಾಕಿದ್ದರು.
ಹೆಚ್ಡಿಕೆ ಅವರ ಈ ಹೇಳಿಕೆ ಬೆನ್ನಲ್ಲೇ ಮಾಜಿ ಸಿಎಂ ಬಿಎಸ್ವೈ ಅವರು," ಹೆಚ್ಡಿಕೆ ಅವರು ತಪ್ಪಿ ಮಾತನಾಡಿದ್ದಾರೆ" ಎಂದು ಹೇಳಿದ್ದಾರೆ.