ಶ್ರೀನಗರ, ಅ.09 (DaijiworldNews/PY): ಶ್ರೀನಗರದ ನಾಟಿಪೋರಾ ಪ್ರದೇಶದ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕ ಹತನಾಗಿದ್ದರೆ, ಮತ್ತೋರ್ವ ತಪ್ಪಿಸಿಕೊಂಡಿದ್ದಾನೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಮೃತ ಭಯೋತ್ಪಾದಕನನ್ನು ತ್ರೆಂಜ್ ಶೋಪಿಯಾನ್ನ ಅಕಿಬ್ ಬಶೀರ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಬಂಧ ಹೊಂದಿರುವುದಾಗಿ ತಿಳಿದುಬಂದಿದೆ.
"ಉಗ್ರರಿಂದ ಎರಡು ಮ್ಯಾಗಜಿನ್ಗಳು, ಒಂದು ಎಕೆ-47 ಹಾಗೂ ಆಯುಧ ಚೀಲವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.
"ಶುಕ್ರವಾರ ಸಂಜೆ ನಡೆದ ಸಣ್ಣ ಗುಂಡಿನ ಕಾಳಗದಲ್ಲಿ ಭಯೋತ್ಪಾದಕನನ್ನು ಹತ್ಯೆಗೈಯಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಭಯೋತ್ಪಾದಕರ ಅಡಗಿ ಕುಳಿತಿದ್ದು, ನಾತಿಪೋರಾ ಬಳಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದರು, ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲಾಯಿತು. ಸ್ವಲ್ಪ ಸಮಯದ ಬಳಿಕ ಎನ್ಕೌಂಟರ್ ನಡೆಯಿತು" ಎಂದು ತಿಳಿಸಿದ್ದಾರೆ.