ನವದೆಹಲಿ, ಅ.08 (DaijiworlNews/HR): ಸರ್ಕಾರಿ ಸ್ವಾಮ್ಯದ 'ಏರ್ ಇಂಡಿಯಾ'ವನ್ನು ಟಾಟಾ ಸನ್ಸ್ ಸಂಸ್ಥೆಯು 18,000 ಕೋಟಿಗೆ ತನ್ನದಾಗಿಸಿಕೊಂಡಿದೆ.
'ಏರ್ ಇಂಡಿಯಾ'ದ ಹರಾಜು ಪ್ರಕ್ರಿಯೆಯಲ್ಲಿ 'ಟಾಟಾ ಸನ್ಸ್' ಸಂಸ್ಥೆಯು ಶುಕ್ರವಾರ ಯಶಸ್ವಿ ಬಿಡ್ಡರ್ ಆಗಿ ಆಯ್ಕೆಯಾಗಿದ್ದು, ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದನ್ನು ಖಾಸಗೀಕರಣಗೊಳಿಸುವ ದೀರ್ಘಕಾಲದ ಪ್ರಕ್ರಿಯೆ ಅಂತ್ಯಕಂಡಿದೆ.
ಈ ಕುರಿತು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, "ಆಟೋ-ಟು-ಸ್ಟೀಲ್ಟಾ-ಟಾಟಾ ಸಮೂಹ ಸಂಸ್ಥೆಯ ಒಡೆತನದ 'ಟಾಟಾ ಸನ್ಸ್' ಸಂಸ್ಥೆಯು, ಸರ್ಕಾರದ ಶೇ.100ರಷ್ಟು ಪಾಲುದಾರಿಕೆ ಇರುವ ಏರ್ ಇಂಡಿಯಾದ ಖರೀದಿಗೆ 18,000 ಕೋಟಿ ಬಿಡ್ ಸಲ್ಲಿಸಿದೆ" ಎಂದು ತಿಳಿಸಿದರು.
ಇನ್ನು ಏರ್ ಇಂಡಿಯಾ 68 ವರ್ಷಗಳ ಬಳಿಕ ತನ್ನ ಸಂಸ್ಥಾಪಕರ ಮಾಲೀಕತ್ವಕ್ಕೆ ವಾಪಸ್ಸಾಗಿರುವುದಕ್ಕೆ ಸಂತೋಷ ಪಟ್ಟ ರತನ್ ಟಾಟಾ "ಏರ್ ಇಂಡಿಯಾ, ವೆಲ್ಕಂ ಬ್ಯಾಕ್" ಎಂದು ಟ್ವೀಟ್ ಮಾಡಿದ್ದಾರೆ.