ಬೆಂಗಳೂರು, ಅ.08 (DaijiworldNews/PY): "ಬಿಜೆಪಿ ನಿಮ್ಮ ನಾಯಕರ ಬಳಿ ಬರುವ ಹೆಣ್ಣು ಮಕ್ಕಳು ಬಾಡಿಗಾರ್ಡ್ಗಳನ್ನು ಇಟ್ಟುಕೊಂಡು ಬರಬೇಕೇ? ಅಥವಾ ಬೇರೆ ಯಾವುದಾದರೂ ಸುರಕ್ಷತಾ ಕ್ರಮಗಳನ್ನು ವಹಿಸಬೇಕೇ?" ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿ ನಿಮ್ಮ ನಾಯಕರ ಬಳಿ ಬರುವ ಹೆಣ್ಣು ಮಕ್ಕಳು ಬಾಡಿಗಾರ್ಡ್ಗಳನ್ನು ಇಟ್ಟುಕೊಂಡು ಬರಬೇಕೇ? ಅಥವಾ ಬೇರೆ ಯಾವುದಾದರೂ ಸುರಕ್ಷತಾ ಕ್ರಮಗಳನ್ನು ವಹಿಸಬೇಕೇ ಮೊದಲು ಹೇಳಿ" ಎಂದಿದೆ.
"ಬಿ ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಆಪ್ತ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ, ಆಪ್ತ ಸಹಾಯಕನ ಭ್ರಷ್ಟಾಚಾರ, ಬಿಎಸ್ವೈ ಆಪ್ತರ ಮೇಲಿನ ಐಟಿ ದಾಳಿ. ಇವೆಲ್ಲವೂ ಯಾವ ನಿಗೂಢ ರಹಸ್ಯವನ್ನು ಹೊಂದಿವೆ? ಈಗ ಬಿಜೆಪಿ vs ಬಿಎಸ್ವೈ ಜಟಾಪಟಿ ಹೊಸ ಆಯಾಮಕ್ಕೆ ಮುನ್ನುಡಿಯೇ ಈ ಐಟಿ ದಾಳಿ? ಬಿಜೆಪಿ ನಾಯಕರು ಈ ಬಗ್ಗೆ ತುಟಿ ಬಿಚ್ಚದಿರುವುದೇಕೆ?" ಎಂದು ಪ್ರಶ್ನಿಸಿದೆ.
"ಮಾನ್ಯ ಡಿ ಕೆ ಶಿವಕುಮಾರ್ ಅವರೇ, ನಿಮ್ಮ ಬಳಿ ಬರುವವರು ಏನು ಮಾಡಬೇಕು? ತಲೆಗೆ ಹೆಲ್ಮೆಟ್ ಧರಿಸಿಕೊಂಡು ಬರಬೇಕೇ?" ಎಂದು ಬಿಜೆಪಿ ಪ್ರಶ್ನಿಸಿತ್ತು.