ಇಂಡಿ ಅ 08 (DaijiworldNews/MS): ಬಿಜೆಪಿ ವಿರುದ್ದ ಮಾತನಾಡಿದರೆ ದೇಶದ್ರೋಹಿ ಪಟ್ಟ, ರೈತರು ತಮ್ಮ ಹಕ್ಕಿಗಾಗಿ ಹೋರಾಟ ಮಾಡಿದರೆ ಅವರಿಗೆ ಭಯೋತ್ಪಾದಕ ಹಣೆಪಟ್ಟಿ ನೀಡುತ್ತಾರೆ. ದೇಶಕ್ಕೆ ಸ್ವಾತಂತ್ರ ನೀಡಿದ ಮಹಾತ್ಮ ಗಾಂಧಿ ಅವರನ್ನೇ ಟೀಕೆ ಮಾಡಿದ ಬಿಜೆಪಿಯವರು ಇನ್ನು ನಿಮ್ಮನ್ನು ಬಿಡುತ್ತಾರೆಯೇ ಎಂದು ರೈತರನ್ನು ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿ.ಡಿ.ಪಾಟೀಲರ ನೇತೃತ್ವತ್ವದಲ್ಲಿ ನೀರಾವರಿಗಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಅವರನ್ನು ಭೇಟಿ ಆಗಿ ಪ್ರತಿಭಟನೆ ಕೈಬಿಡಲು ಹೇಳು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರಿಂದ ನಾನು ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಹೀಗಾಗಿ ಧರಣಿ ಕೈಬಿಡಲಾಗಿದೆ. ಭಾರತದಲ್ಲಿ ರೈತರ ಪರವಾಗಿ ಸಮಗ್ರ ನೀರಾವರಿಗಾಗಿ 37 ದಿನಗಳ ಕಾಲ ಬಿ.ಡಿ.ಪಾಟೀಲ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದರೂ ಯಾರೂ ಸ್ಪಂದಿಸಿಲ್ಲ. ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಿರತ ರೈತರ ಮೇಲೆ ಬಿಜೆಪಿ ಸಚಿವರ ಪುತ್ರ ಜೀಪ್ ಹರಿಸಿ 8 ಜನ ರೈತರನ್ನು ಕೊಲೆ ಮಾಡಿದ್ದಾರೆ. ಬೆಳೆದ ಬೆಳೆಗೆ ಬೆಲೆ ಕೊಡಿ ಎಂದು ಕೇಳಲು ಪ್ರತಿಭಟನೆ ಮಾಡಿದರೆ ಅವರ ಮೇಲೆ ಜೀಪ್ ಹರಿಸಿದ್ದು, ನೋಡಿದರೆ ದೇಶ ಯಾವ ಕಡೆ ಹೊರಟಿದೆ ಎಂದು ಬೇಸರವಾಗುತ್ತದೆ. ಬಿಜೆಪಿ ಸರ್ಕಾರಕ್ಕೆ ದುರಹಂಕಾರ, ಅಹಂ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯವರು ಹೇಳುವಷ್ಟು ಸುಳ್ಳುಗಳನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ ನೀಡಿದ ಮಹಾತ್ಮ ಗಾಂಧಿ ಅವರನ್ನೇ ಟೀಕೆ ಮಾಡಿದ ಬಿಜೆಪಿಯವರು ಹೋರಾಟಾಗಾರರನ್ನು ಬಿಡುತ್ತಾರೆಯೇ ಹಿಂದುಳಿದ ವರ್ಗದ ಜನರನ್ನು ಹಾಗೂ ರೈತರನ್ನು ಎತ್ತಿ ಹಿಡಿಯುವ ಕೆಲಸ ಮಾಡದಿದ್ದರೆ ಸರ್ಕಾರಗಳು ಇದ್ದರೆಷ್ಟು ಸತ್ತರೆಷ್ಟುಎಂದು ಕಿಡಿಕಾರಿದ್ದಾರೆ.