ಬೆಂಗಳೂರು, ಅ.08 (DaijiworldNews/PY): "ಕಂಡ ಕಂಡವರ ಮೇಲೆ ಹಲ್ಲೆ ಮಾಡುವುದು, ಕೊಲ್ಲುವುದು ಕಾಂಗ್ರೆಸ್ ಪಕ್ಷದ ಹಳೆ ಚಾಳಿಯಲ್ಲವೇ?" ಎಂದು ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, "ಮಾನ್ಯ ಡಿ ಕೆ ಶಿವಕುಮಾರ್ ಅವರೇ, ಜನರು ಈಗಾಗಲೇ ನಿಮ್ಮ ಹಾಗೂ ನಿಮ್ಮ ಪಕ್ಷದ ಮುಖಂಡರ ಭಾವಚಿತ್ರ ತೆಗೆದುಕೊಳ್ಳಲಾರಂಭಿಸಿದ್ದಾರೆ. ಕಂಡ ಕಂಡವರ ಮೇಲೆ ಹಲ್ಲೆ ಮಾಡುವುದು, ಕೊಲ್ಲುವುದು ನಿಮ್ಮ ಪಕ್ಷದ ಹಳೆ ಚಾಳಿಯಲ್ಲವೇ? ಸಾವಿರಾರು ಮುಗ್ದ ಸಿಖ್ಖರಿಗೂ, ನಾವು ಕಾಂಗ್ರೆಸ್ಸಿಗರಿಂದ ಕೊಲ್ಲಲ್ಪಡುತ್ತೇವೆ ಎಂಬ ಸುಳಿವಿರಲಿಲ್ಲ" ಎಂದಿದೆ.
"ಮಾನ್ಯ ಡಿ ಕೆ ಶಿವಕುಮಾರ್ ಅವರೇ, ನಿಮ್ಮ ಬಳಿ ಬರುವವರು ಏನು ಮಾಡಬೇಕು? ತಲೆಗೆ ಹೆಲ್ಮೆಟ್ ಧರಿಸಿಕೊಂಡು ಬರಬೇಕೇ?" ಎಂದು ಪ್ರಶ್ನಿಸಿದೆ.
"ಸಾರ್ವಜನಿಕರಲ್ಲಿ ಮನವಿ: ಬಿಜೆಪಿ ನಾಯಕರ ಕಾರು ನಿಮ್ಮ ಪಕ್ಕದಲ್ಲಿ ಹೋಗುವಾಗ ನಿಮ್ಮ ಫೋನ್ ಕ್ಯಾಮರಾದಿಂದ ರೆಕಾರ್ಡ್ ಮಾಡಿಕೊಳ್ಳಿ. ಯಾವಾಗ ಯಾರ ಮೇಲೆ ಕಾರು ಹತ್ತಿಸಿ ಕೊಲ್ಲುತ್ತಾರೆ ತಿಳಿಯುವುದಿಲ್ಲ. ಹೀಗಿದ್ದಾಗ, ನಿಮ್ಮ ವಿಡಿಯೋ ಮುಂದೆ ಮಹತ್ವದ ಸಾಕ್ಷ್ಯವಾಗಿರಲಿದೆ. ಇದು ದೇಶಕ್ಕೆ ನೀವು ನೀಡುವ ಉತ್ತಮ ಕೊಡುಗೆಯಾಗಿರಲಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದರು.